ಎಲ್ಲಾ ವರ್ಗಗಳನ್ನು ಕೂಡ ಸಾಮಾಜಿಕ ಮುಖ್ಯ ಭೂಮಿಕೆಯಲ್ಲಿ ತರುವ ಚಿಂತನೆ

ನಗರ ಎಸ್ ಸಿ ಮೋರ್ಚಾ ಪದಗ್ರಹಣ ಸಮಾರಂಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್.

ಭಾರತೀಯ ಜನತಾ ಪಾರ್ಟಿ ಸಂಘಟನಾತ್ಮಕವಾಗಿ ವಿಸ್ತಾರ ಗೊಳ್ಳುವ ಜೊತೆ ಈ ದೇಶದ ಸಾಮಾಜಿಕವಾಗಿ ಹಿಂದುಳಿದ ಎಲ್ಲಾ ವರ್ಗಗಳನ್ನು ಪಕ್ಷದ ಹಾಗು ಸಮಾಜದ ಮುಖ್ಯ ಭೂಮಿಕೆಯಲ್ಲಿ ತರುವ ಪ್ರಯತ್ನಗಳನ್ನು ವಿವಿಧ ಮೋರ್ಚಾಗಳ ಪರಿಕಲ್ಪನೆಯಲ್ಲಿ ನಡೆಸುತ್ತಿದೆ. ಪಕ್ಷವು ಸರ್ವ ಪಕ್ಷಿ ಹಾಗು ಸರ್ವ ವ್ಯಾಪಿ ಯಾಗಿ ಬೆಳೆದಿದ್ದು ಎಲ್ಲ ವರ್ಗಗಳ ಅರ್ಹತೆ ಮತ್ತು ಪ್ರತಿಭೆಯನ್ನು ಮಾನದಂಡವಾಗಿಟ್ಟುಕೊಂಡು ಪಕ್ಷಕ್ಕಾಗಿ ದುಡಿದ  ಎಲ್ಲಾ ವರ್ಗಗಳ ಕಾರ್ಯಕರ್ತರಿಗೆ ಉನ್ನತ ಹುದ್ದೆಗಳನ್ನು ನೀಡಿ ಗೌರವಿಸಿದೆ ಎಂದು ಕುಯಿಲಾಡಿ ಸುರೇಶ್ ನಾಯಕ್ ಅಭಿಮತ ವ್ಯಕ್ತ  ಪಡಿಸಿದರು. ಅವರು ಉಡುಪಿ ನಗರ ಬಿಜೆಪಿ ಆಶ್ರಯದಲ್ಲಿ ನಗರ ಎಸ್ ಸಿ ಮೋರ್ಚಾ ಪದಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ನೂತನ ರಾಜ್ಯ ಎಸ್ ಸಿ ಮೋರ್ಚಾ ಪ್ರದಾನ ಕಾರ್ಯದರ್ಶಿ ಹಾಗು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು ರವರು ಮಾತನಾಡಿ ಬಿಜೆಪಿಯಲ್ಲಿ ಎಲ್ಲ ವರ್ಗದವರಿಗೂ ಅವಕಾಶಗಳು ಮುಕ್ತವಾಗಿದ್ದು ಅದರ ಪರಿಶಿಷ್ಟ ವರ್ಗದ ಜನತೆ ಅದರ ಸದುಪಯೋಗ ಪಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.ನೂತನ ಎಸ್ ಸಿ  ಮೋರ್ಚಾದ ಅಧ್ಯಕ್ಷರಾಗಿ ಕಿರಣ್, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಂದ್ರ, ಉಪಾದ್ಯಕ್ಷರುಗಳಾಗಿ ಕೀರ್ತನ್ ಮತ್ತು ಕುಮಾರಿ ತೃಪ್ತಿ, ಕಾರ್ಯದರ್ಶಿಗಳಾಗಿ ಪ್ರಥ್ವಿರಾಜ್, ಕೃಷ್ಣ, ಹಾಗು ಕಾರ್ಯಕಾರಿಣಿ ಸದಸ್ಯರುಗಳು ಪದಪ್ರದಾನ ಗೊಂಡರು.

ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿ ಅಮೀನ್,  ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷ ಗೋಪಾಲ್, ಉಡುಪಿ ನಗರಾಶ್ರಯ ಸಮಿತಿ ಸದಸ್ಯೆ ಶ್ರೀಲತಾ ವಿಜಯ್, ನಗರಸಭಾ ಸದಸ್ಯ ರಾಜು, ವಾಸು ಬನ್ನಂಜೆ  ಉಪಸ್ಥಿತರಿದ್ದರು. ನಗರ ಬಿಜೆಪಿ ಪ್ರದಾನ ಕಾರ್ಯದರ್ಶಿ ದಿನೇಶ್ ಅಮೀನ್ ಸ್ವಾಗತಿಸಿದರು. ಮಂಜುನಾಥ್ ಮಣಿಪಾಲ ನಿರೂಪಿಸಿದರು.

 
 
 
 
 
 
 
 
 
 
 

Leave a Reply