ಬೀಚ್ ಉತ್ಸವ ಕುರಿತ ಸಂಪೂರ್ಣ ಮಾಹಿತಿಯ ಪ್ರಮೋ ಬಿಡುಗಡೆ

ಉಡುಪಿ ಜಿಲ್ಲಾ ರಜತ ಉತ್ಸವ ಅಂಗವಾಗಿ ಜನವರಿ 20 ರಿಂದ 22 ರ ವರೆಗೆ ನಡೆಯುವ ಬೀಚ್ ಉತ್ಸವ ಕುರಿತ ಸಂಪೂರ್ಣ ಮಾಹಿತಿಯ ಪ್ರಮೋ ವನ್ನು ಮಲ್ಪೆ ಬೀಚ್ ನಲ್ಲಿ ಶಾಸಕ ರಘುಪತಿ ಭಟ್ ಬಿಡುಗಡೆ ಮಾಡಿದರು.

ಇದೇ ಸಂದರ್ಭದಲ್ಲಿ ಬೀಚ್ ಉತ್ಸವದ ಯಶಸ್ವಿಗಾಗಿ ರಚಿಸಿರುವ ವಿವಿಧ ಸಮಿತಿಗಳು ಹಾಗೂ ಭಜನಾ ಮಂಡಳಿಗಳೊಂದಿಗೆ ಇದುವರೆಗೆ ಕೈಗೊಂಡಿರುವ ಸಿದ್ದತೆಗಳ ಬಗ್ಗೆ ಸಭೆ ನಡೆಸಲಾಯಿತು.

ಉತ್ಸವ ಸಂದರ್ಭದಲ್ಲಿ ವಸತಿ,ಸಂಚಾರ ವ್ಯವಸ್ಥೆ, ಪಾರ್ಕಿಂಗ್ ಬಗ್ಗೆ ಚರ್ಚೆ ನಡೆಯಿತು.

ಇದೇ ಸಂದರ್ಭದಲ್ಲಿ ಬೀಚ್ ನಲ್ಲಿ ವಿನೂತನ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳನ್ನು ಹಾಗೂ ವಿಶೇಷ ದೀಪಾಲಂಕಾರ ವ್ಯವಸ್ಥೆಯನ್ನು ಶಾಸಕರು ಉದ್ಘಾಟಿಸಿದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಸನ್ನ ಹೆಚ್., ಎಸ್.ಪಿ. ಹಾಕಿ ಅಕ್ಷಯ್ ಮಚ್ಚಿನ್ದ್ರ , ತರಬೇತಿ ನಿರತ ಐ. ಎ. ಎಸ್.ಅಧಿಕಾರಿ ಯತೀಶ್, ನಗರಸಭಾ ಉಪಾಧ್ಯಕ್ಷ ಲಕ್ಷ್ಮಿ ಮಂಜುನಾಥ್, ಮಲ್ಪೆ ಬೀಚ್ ನಿರ್ವಾಹಕ ಸುದೇಶ್ ಶೆಟ್ಟಿ,ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳು, ಮತ್ತಿತರರು ಇದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

 
 
 
 
 
 
 
 
 
 
 

Leave a Reply