ಮೆಹಂದಿ ಕಾರ್ಯಕ್ರಮ ಫೋಟೋಗ್ರಾಫರ್ ವಿಡಿಯೋಗ್ರಾಫರ್ ಮೇಲೆ ಕ್ರಮ ಕೈಗೊಳ್ಳುವ ನಿರ್ಧಾರ ಸೇಡಿನ ಸಂಚಾಗದಿರಲಿ

ಉಡುಪಿ: ಜಿಲ್ಲೆಯಲ್ಲಿ ಮದುವೆಯ ಮುನ್ನ ನಡೆಯುವ ಮೆಹಂದಿ ಕಾರ್ಯಕ್ರಮಕ್ಕೆ ಇನ್ನು ಮುಂದೆ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿರುವುದು ಇದರ ಹಿಂದೆ ಸೇಡಿನ ಕ್ರಮ ಇರಬಹುದು ಎಂದು ಗ್ರಹಿಸಲಾಗಿದೆ.

ಇತ್ತೀಚೆಗೆ ಉಡುಪಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಮನೆಯ ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಲಾಕ್ ಡೌನ್ ಇದ್ದರೂ ಸಾಂಸ್ಕೃತಿಕ ವೈಭವದ ಸ್ವಾಗತ ಕಾರ್ಯಕ್ರಮ ನಡೆಸಿ ಮಾಸ್ಕ್ ಧರಿಸದೇ ಇರುವುದು ಕಂಡು ಬಂದಿರುವುದರ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಭಾವಚಿತ್ರ ಸಮೇತ ವಿಡಿಯೋ ಚಿತ್ರಣ ಹರಿದಾಡಿತ್ತು.

ಹಾಗಾಗಿ ಈ ಬಾರಿ ಮೆಹಂದಿ ಕಾರ್ಯಕ್ರಮ ನಡೆಸುವ ಮೇಲೆ ಕ್ರಮ ಕೈಗೊಳ್ಳುವ ಜೊತೆಗೆ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಮೇಲೆ ಕ್ರಮಕೈಗೊಳ್ಳುತ್ತೇನೆ, ಎಂದಿರುವುದು ದ್ವೇಷದ ಹಿನ್ನೆಲೆ ಇದಯೇ ಎಂದು ಸಂಶಯ ಮೂಡುತ್ತದೆ. ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ, ಶಾಮಿಯಾನ, ಕ್ಯಾಟರಿಂಗ್ ವ್ಯವಸ್ಥೆಯೂ ಇರುತ್ತದೆ.

ಅವರು ಭಾಗವಹಿಸುವುದರಿಂದ ಅವರ ಮೇಲೆ ಏಕೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಪ್ರಶ್ನೆ ಮೂಡುತ್ತದೆ. ಉಡುಪಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು, ಜಿಲ್ಲಾಡಳಿತದ ಕ್ರಮದಹಿಂದೆ ಪ್ರಶ್ನೆ ಮಾಡುವಂತಾಗಿದೆ ಇದರ ಹಿಂದೆ ಜಿಲ್ಲಾಡಳಿತ ದ್ವೇಷದ ಕ್ರಮವಾಗಿರಬಹುದೇ? ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಗೆ ಈ ಬಾರಿಯ ಸರಕಾರದಿಂದ ನೆರವು ಕೂಡ ಸಿಗದ ಅವರ ಕುಟುಂಬ ನಿರ್ವಹಿಸುವುದು, ಕಷ್ಟಕರವಾಗಿದೆ. ಅವರಿಗೆ ಸರಕಾರದಿಂದ ಯಾವುದೇ ಭದ್ರತೆ ಇಲ್ಲ ಮತ್ತು, ಸಾರ್ವಜನಿಕ ಕಾರ್ಯಕ್ರಮ ನಡೆಯದೇ, ಅವರು ನಂಬಿದ ಉದ್ಯೋಗ ಇಲ್ಲದೆ, ಅತಂತ್ರರಾಗಿದ್ದಾರೆ.ಹೀಗಿರುವಾಗ ಕೇವಲ ವಿಡಿಯೋಗ್ರಾಫರ್ ಮತ್ತು ಫೋಟೋಗ್ರಾಫರ್ ಮೇಲೇಯೇ ಜಿಲ್ಲಾಡಳಿತ ಕ್ರಮ ಕೈಗೊಳ್ಳುವುದು ಕೈಬಿಡಬೇಕು.

ಯಾರು ಕಾರ್ಯಕ್ರಮ ಸಂಘಟಿಸುತ್ತಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಹೊರತು ಈ ರೀತಿಯ ಜಿಲ್ಲಾಡಳಿತ ಕ್ರಮ ಸರಿಯಲ್ಲ ಎಂದು ರಾಜ್ಯ ಯುವ ಕಾಂಗ್ರೆಸ್ ನ ಮಾಜಿ ಕಾರ್ಯದರ್ಶಿ ಜಯಶೆಟ್ಟಿ ಬನ್ನಂಜೆ ಛಾಯಾಗ್ರಹಕ ಗಣೇಶ್ ಶೆಟ್ಟಿ ಕೀಳಂಜೆ, ಸಾಮಾಜಿಕ ಕಾರ್ಯಕರ್ತ ಗಣೇಶ್ ಸರಳೇಬೆಟ್ಟು ಮಾನ್ಯ ಜಿಲ್ಲಾಧಿಕಾರಿಗಳು ಈ ನಿರ್ಣಯವನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಕೋರೋನ ಸಂಕಷ್ಟ ಸಮಯದಲ್ಲಿ ಕೋವಿಡ್ 19ವೈರಸ್ ನಡುವೆ ಕೈಜೋಡಿಸಿ ಜಿಲ್ಲಾಡಳಿತ ಹೋರಾಡಬೇಕು ಹೊರತು ಫೋಟೋ ವಿಡಿಯೋಗ್ರಾಫರ್ ವಿರುದ್ಧ ಅಲ್ಲ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಎಸ್ಸಿ ಘಟಕದ ಸಂಚಾಲಕ ಬಿ,ಕೆ ರಾಜ್ ಕೆಮ್ಮಣ್ಣು ಹೇಳಿದ್ದು ಜಿಲ್ಲಾಧಿಕಾರಿಯ ಕ್ರಮ ಸರಿಯಾದುದಲ್ಲ ಎಂದಿದ್ದಾರೆ.

 
 
 
 
 
 
 
 
 
 
 

Leave a Reply