ಲಾಕ್ಡೌನ್ ಮುಗಿಯುವವರೆಗೆ ಜಿಲ್ಲೆಯಲ್ಲಿ ಮದುವೆ ಸಮಾರಂಭಗಳಿಗೆ ಅನುಮತಿ ಇಲ್ಲ~ಡಿಸಿ ಜಗದೀಶ್ 

ಉಡುಪಿ: ಉಡುಪಿಯಲ್ಲಿ ಕೋರೊನಾ ಸೋಂಕು ವಿಪರೀತ ಹೆಚ್ಚಾಗುತ್ತಿದ್ದು, ಇದೀಗ ವೀಡಿಯೋ ಒಂದನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದ್ದು ಯಾರು ಮೆಹೆಂದಿ, ಮದುವೆ ಮಾಡುವ ಮನೆಗಳಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.​ 
ಅದರೊಂದಿಗೆ ಅಗತ್ಯ ವಸ್ತುಗಳಿಗಾಗಿ ಯಾರು ಒಡಾಟ ನಡೆಸುತ್ತಿದ್ದಾರೆ. ಖರೀದಿ ಮಾಡಿ ಬಂದ ನಂತರವೂ ಸೋಂಕು ಕಾಣಿಸಿಕೊಳ್ಳು ತ್ತಿದೆಯೆಂದು ಅಭಿಪ್ರಾಯ ಪಟ್ಟಿದ್ದಾರೆ. ಮನೆ ಮನೆ ಭೇಟಿಯ ಸಂದರ್ಭದಲ್ಲಿ ಈ ವಿಚಾರ ತಿಳಿದು ಬಂದಿದೆಯೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮದುವೆಗಳನ್ನು ದಯವಿಟ್ಟು ಮುಂದೂಡಿ, ಮದುವೆ ಕಾರ್ಯಕ್ರಮ ನಡೆಸಿ ನಮ್ಮ ಹಿರಿಯರನ್ನು ಕಳೆದುಕೊಳ್ಳುದಕ್ಕಿಂತ ಮುಂದೂಡುವುದು ಸೂಕ್ತವೆಂದು ಸಲಹೆ ನೀಡಿದ್ದಾರೆ. ಮದುವೆ ನೆಪದಲ್ಲಿ ಮೆಹೆಂದಿ ನಡೆಸಲಾಗುತ್ತಿದೆ. ಅಂತವರ ಮೇಲೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವು ದೆಂದು ಹೇಳಿದ್ದಾರೆ.​ 

 

ಎಲೆಕ್ಟ್ರಿಕಲ್ ವಸ್ತುಗಳ ಖರೀದಿಗೆ ಬುಧವಾರ ಬೆಳಗ್ಗೆ 6 ರಿಂದ 10 ವರೆಗೆ ಒಂದು ದಿನದ ಅವಕಾಶ, ಸಾರ್ವಜನಿಕರು ವಾಹನಗಳಲ್ಲಿ ಅನಗತ್ಯ ತಿರುಗಾಟ ನಡೆಸಿದ್ರೆ ವಾಹನಗಳ ಸೀಜ್ ಮಾಡುತ್ತೇವೆ ಎಂದ ಜಿಲ್ಲಾಧಿಕಾರಿ ಜಗದೀಶ್ಮತ್ತೆ ಹದಿನೈದು ದಿನ ಸಂಯಮ ಕಾಪಾಡಿದರೆ ಜಿಲ್ಲೆ ರೋಗ ಮುಕ್ತವಾಗಲು ಸಾಧ್ಯವಾಗುತ್ತದೆ. ದಯವಿಟ್ಟು ಸಹಕರಿಸಿ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಕೈ ಮುಗಿದು ವೀಡಿಯೋದಲ್ಲಿ ಪ್ರಾರ್ಥಿಸಿದ್ದಾರೆ.

​​

​​

 
 
 
 
 
 
 
 
 
 
 

Leave a Reply