ಯಾರಿಗೂ ತೊಂದರೆ ಕೊಡದೆ ನಾವು ಸಂತೋಷದಲ್ಲಿ ಇರುವುದೇ ಜೀವನದ ಯಶಸ್ಸು~ ಯಂಡಮೂರಿ ವೀರೇಂದ್ರನಾಥ್

ಉಡುಪಿ : ಮೊಬೈಲ್ ನೋಡುವ  ಮಕ್ಕಳು ಕೇವಲ ವೀಕ್ಷಕರಾಗುತ್ತಾರೆ. ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಕೊಳ್ಳುವವರು ಸಾಧಕರಾಗುತ್ತಾರೆ. ಮಕ್ಕಳ ಸಣ್ಣ ಸಾಧನೆಗೂ ಪ್ರೋತ್ಸಾಹ ನೀಡಬೇಕು. ಇದು ಇನ್ನಷ್ಟು ಸಾಧನೆಗೆ ಪ್ರೇರಣೆಯಾಗುತ್ತದೆ. ಕ್ರಮೇಣ ಮಕ್ಕಳು ಕೀಳರಿಮೆ ಮತ್ತು ತಮ್ಮಲ್ಲಿರುವ ಕೊರತೆಗಳನ್ನು ಮರೆಯುತ್ತಾರೆ ಎಂದು  ಪ್ರಸಿದ್ಧ ಕಾದಂಬರಿಕಾರ ಹಾಗೂ ಸಾಹಿತಿ ಯಂಡಮೂರಿ ವೀರೇಂದ್ರನಾಥ್ ಹೇಳಿದರು.ಸೋಮವಾರ ಬನ್ನಂಜೆ ಶ್ರೀ ನಾರಾಯಣ ಗುರು ಅಡಿಟೋರಿಯಂನಲ್ಲಿ  ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ,  ಹರ್ಷ ಉಡುಪಿ, ಬಿಲ್ಲವರ ಸೇವಾ ಸಂಘ ಬನ್ನಂಜೆ ಸಹಯೋಗದಲ್ಲಿ ಹಾಗೂ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ, ಸಂಸ್ಕತಿ ವಿಶ್ವ ಪ್ರತಿಷ್ಠಾನ, ಉಡುಪಿ ಕಮಲ್ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬಯಿ  ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.6 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಕೀಳರಿಮೆ ಇರುತ್ತದೆ. ಮುಖ್ಯವಾಗಿ ಹೆಣ್ಮಕ್ಕಳಲ್ಲಿ ಸೌಂದ ರ್ಯದ ಕೊರತೆ ಕಾಡುತ್ತದೆ. ಈ ಸಂದರ್ಭದಲ್ಲಿ ಅಸಕ್ತಿಕರ ಕ್ಷೇತ್ರದಲ್ಲಿ ಬೆಳೆಯುವಂತೆ ಪ್ರೇರೇಪಣೆ ನೀಡಬೇಕು. ನಾವು ಹೇಗೆ ಇದ್ದೆವೆಯೋ ಹಾಗೇ ಬದುಕನ್ನು ಸ್ವೀಕರಿಸುವುದಕ್ಕೆ  ಕಲಿಯಬೇಕು. ಆಗ ಸಂತೋಷದಿಂದ ಇರಲು ಸಾಧ್ಯ ಎಂದರು.
ಯಾರಿಗೂ ತೊಂದರೆ ಕೊಡದೆ ನಾವು ಸಂತೋಷದಲ್ಲಿ ಇರುವುದೇ ಜೀವನದ ಯಶಸ್ಸು. ಯಾವಾಗಲೂ ಸಂತೋಷದಲ್ಲಿರುವುದಕ್ಕೆ ಆನಂದವೆನ್ನುತ್ತಾರೆ. ಪ್ರಕೃತಿ, ಪುಸ್ತಕ, ಸಂಗೀತದೊಂದಿಗೆ ಸಂತೋಷ     ಪಡುವುದು ಅತ್ಮಾನಂದ. ಮನುಷ್ಯ ತನ್ನನ್ನು ತಾನು ಪ್ರೀತಿಸಲು ಕಲಿಯಬೇಕು. ಅರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಉತ್ತಮ ಅಹಾರ ಪದ್ಧತಿ ಮತ್ತು ಚೆನ್ನಾಗಿ ನಿದ್ದೆ ಅಗತ್ಯ ಎಂದರು.ರೂಬಿಕ್ ಕ್ಯೂಬ್ ನಲ್ಲಿ ಗಿನ್ನಿಸ್ ದಾಖಲೆ  ಮಾಡಿರುವ ಗ್ರಾಂಡ್ ಮಾಸ್ಟರ್ ಅಫಾನ್ ಕುಟ್ಟಿ  ಅವರು ರೂಬಿಕ್ ಕ್ಯೂಬ್ ನಿಂದ ಇಂರ್ಟನೆಟ್ ವ್ಯಸನ ಮುಕ್ತಿ ಕುರಿತು ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಬಾಳಿಗಾ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಪಿ.ವಿ. ಭಂಡಾರಿ, ಹರ್ಷ ಆಡಳಿತ ನಿರ್ದೆಶಕ ಸೂರ್ಯಪ್ರಕಾಶ್, ಸಂಸತಿ ವಿಶ್ವ ಪ್ರತಿಷ್ಠಾನ ಸ್ಥಾಪಕ ವಿಶ್ವನಾಥ ಶೆಣೈ, ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ, ಬನ್ನಂಜೆ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಬಾಳಿಗಾ ಅಸ್ಪತ್ರೆ ಅಡಳಿತಾಧಿಕಾರಿ ಸೌಜನ್ಯಾ ಶೆಟ್ಟಿ, ಮನೋವೈದ್ಯ ನಾಗರಾಜ ಮೂರ್ತಿ, ಕಸಾಪ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಉಪಸ್ಥಿತರಿದ್ದರು. ವಿದ್ಯಾಶ್ರೀ ನಿರೂಪಿಸಿದರು. ಪದ್ಮ ರಾಘವೇಂದ್ರ ಪ್ರಾರ್ಥಿಸಿದರು. 

 
 
 
 
 
 
 
 
 
 
 

Leave a Reply