ಡ್ರಗ್ಸ್ ಪೆಡ್ಲರ್ ಗಳನ್ನು ಮಟ್ಟ ಹಾಕಲು ಸೂಚನೆ: ಸಚಿವ ಡಾ. ಜಿ.ಪರಮೇಶ್ವರ್ –

ಕರಾವಳಿ ಭಾಗವಾದ ಮಂಗಳೂರು, ಉಡುಪಿಯಲ್ಲಿ ವಿದ್ಯಾರ್ಥಿಗಳು, ಯುವ ಜನತೆ ಮಾದಕ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಮಾದಕ ದ್ರವ್ಯವನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಪೆಡ್ಲರ್ ಗಳನ್ನು ಮಟ್ಟ ಹಾಕಲು ಪೋಲಿಸರಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.

ಉಡುಪಿಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೋಲಿಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಅಪರಾಧ ಪ್ರಕರಣಗಳನ್ನು ಮಟ್ಟ ಹಾಕಲು ವಿಫಲವಾದರೇ ಇಲ್ಲಿ ಕೇವಲ ಒಬ್ಬರನ್ನು ದೂಷಿಸುವುದು ಸರಿಯಲ್ಲ. ಪ್ರಕರಣ ನಡೆದ ವ್ಯಾಪ್ತಿಗೆ ಒಳಪಟ್ಟ ಠಾಣಾಧಿಕಾರಿ, ಡಿವೈಎಸ್ಪಿ ಮತ್ತು ಎಸ್ಪಿಯೇ ಜವಾಬ್ದಾರರಾಗಿರುತ್ತಾರೆ. ಹಿರಿಯ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾದರಿಯಾಗಿರಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಪೋಲಿಸ್ ನೇಮಕಾತಿ : ರಾಜ್ಯದಲ್ಲಿ ಪ್ರತಿ ವರ್ಷ 2,000 ಪೋಲಿಸರು ನಿವೃತ್ತಿ ಹೊಂದುತ್ತಿದ್ದಾರೆ. ಪ್ರಸ್ತುತ 15,000 ಪೋಲಿಸ್ ಹುದ್ದೆ ಖಾಲಿಯಿದ್ದು, ಹಂತ ಹಂತವಾಗಿ ನೇಮಕಾತಿ ಮಾಡುತ್ತೇವೆ. ಅಂತರ್ ಜಿಲ್ಲಾ ವರ್ಗಾವಣೆಯ ಕುರಿತು ಪರಿಶೀಲನೆ ನಡೆಸುತ್ತೇವೆ. ಈ ಹಿಂದೆ ತಾನು ಗೃಹ ಸಚಿವನಾಗಿದ್ದಾರ ಒಂದೆ ಬಾರಿಗೆ 12,000 ಪೋಲಿಸರಿಗೆ ಮುಂಭಡ್ತಿ ನೀಡಿದ್ದೇನು. ಈಗ ಬಾಕಿಯಿರುವ ಮುಂಭಡ್ತಿ ಮತ್ತು ಬಾಕಿಯಿರುವ ಸಂಬಳ ಏರಿಕೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಹಿಜಾಬ್ ಕುರಿತು ಪ್ರತಿಕ್ರಿಯಿಸಿದ ಅವರು, ಹಿಜಾಬ್ ವಿವಾದ ಈಗ ಸುಪ್ರೀಂ ಕೋರ್ಟ್ ನಲ್ಲಿದೆ. ಅದರ ತೀಪು ಬಂದ ಬಳಿಕ ಸರಕಾರ ತನ್ನ ನಿಲುವನ್ನು ಸ್ಪಷ್ಟ ಪಡಿಸುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್, ಪಶ್ಚಿಮ ವಲಯ ಐಜಿಪಿ ಡಾ.ಚಂದ್ರಗುಪ್ತ, ಉಡುಪಿ ಎಸ್ಪಿ ಅಕ್ಷಯ್ ಹಾಕೆ, ಎ.ಎನ್.ಎಫ್ ಎಸ್ಪಿ ಪ್ರಕಾಶ್ ನಿಕ್ಕಮ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply