‘ಹಿರಿಯರೆಡೆಗೆ ನಮ್ಮ ನಡಿಗೆ’

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ ಮತ್ತು ಬೈಂದೂರು ತಾಲ್ಲೂಕು ಘಟಕ ಹಾಗೂ ಗೀತಾನಂದ ಫೌಂಡೇಷನ್ ಮಣೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಬಿ.ಕೃಷ್ಣ ದೇವಾಡಿಗ ಉಪ್ಪುಂದ ಇವರಿಗೆ ಕನ್ನಡ ರಾಜ್ಯೋತ್ಸವ ಅಂಗವಾಗಿ ‘ಹಿರಿಯರೆಡೆಗೆ ನಮ್ಮ‌ ನಡಿಗೆ ಕಾರ್ಯಕ್ರಮದ ನೆರಳಲ್ಲಿ ‘ಅಭಿನಂದನೆಯ ಅಲೇಖ’ ದೊಂದಿಗೆ ಅವರ ಮನೆಯಲ್ಲಿ ಗೌರವ ಸನ್ಮಾನ ನೀಡಿದರು.ಯಾವುದೇ ಪ್ರಚಾರ ಬಯಸದ, ಕನ್ನಡ ನಾಡು ನುಡಿಗೆ ವಿಶಿಷ್ಟ ಕಾಣಿಕೆ ನೀಡಿದ ಬಿ.ಕೃಷ್ಣ ದೇವಾಡಿಗರು
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಉಪನ್ಯಾಸಕರಾಗಿ ಇಪ್ಪತ್ತೆರಡು ವರ್ಷಗಳಕಾಲ ಸೇವೆ ಸಲ್ಲಿಸುವುರ ಜೊತೆಗೆ ಕಿರಿಯರಿಗೆ ದಾರಿದೀಪವಾಗಿ,ಸಾಹಿತ್ಯಿಕ ಸಾಂಸ್ಕೃತಿಕ ರಾಯಭಾರಿಯೂ ಆಗಿ ಈ ಮಣ್ಣಿನ ಸೊಗಡನ್ನು ಪಸರಿಸಿದ್ದಾರೆ. ಚಿತ್ರ ಕಲೆ,ಟೆರಾಕೋಟ ಮತ್ತು ಗ್ರಾಫಿಕ್ಸ್ ಕಲೆಗಳಲ್ಲಿ ಪರಿಣಿತರಾಗಿದ್ದ ಇವರು ನವದೇಹಲಿ,ಚೆನ್ನೈ, ಬರೋಡ ಮುಂತಾದ ಕಡೆಗಳಲ್ಲಿ ಏಕವ್ಯಕ್ತಿ ನೆಲೆಯಲ್ಲಿ ಪ್ರದರ್ಶನ ನೀಡಿ ಜನಮನ್ನಣೆ ಗಳಿಸುವುದರ ಜೊತೆಗೆ, ಕೆಂದ್ರ ಸಂಸ್ಕೃತಿ ನಿರ್ದೇಶನಾಲಯ ನವದೇಹಲಿಯಲ್ಲಿ ಫೆಲೋಶಿಪ್ ಪಡೆದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬರಹಗಾರರ ಹಿತರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಶ್ರೀ ಉಪೇಂದ್ರ ಸೋಮಯಾಜಿ
ಕಸಾಪ ಜಿಲ್ಲಾ ಅಧ್ಯಕ್ಷ ಶ್ರೀ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿ ನರೇಂದ್ರಕುಮಾರ್ ಕೋಟ,ಗೌರವ ಕೋಶಾಧ್ಯಕ್ಷ ಮನೋಹರ ಪಿ,ಕಸಾಪ ಬೈಂದೂರು ತಾಲ್ಲೂಕು ಘಟಕದ ಅಧ್ಯಕ್ಷ ಡಾ.ರಘು ನಾಯ್ಕ ಗೌರವ ಕಾರ್ಯದರ್ಶಿ ನಾಗರಾಜ ಪಟ್ವಾಲ್, ಸದಸ್ಯ ಕೆ.ಪುಂಡಲೀಕ ನಾಯಕ್ ಉಪಸ್ಥಿತರಿದ್ದು, ಸರ್ವರೂ ಮನದಾಳದ ಮಾತುಗಳನ್ನಾಡಿ ಕೃಷ್ಣ ದೇವಾಡಿಗರಿಗೆ ಶುಭಕೋರಿದರು,ಈ ಸಂದರ್ಭದಲ್ಲಿ ಅವರ ಪತ್ನಿ ಸುಶೀಲಾ ಕೃಷ್ಣ ದೇವಾಡಿಗ
ಮಕ್ಕಳು, ಬಂಧು ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮ ಚಂದಗಾಣಿಸಿದರು.

 
 
 
 
 
 
 
 
 

Leave a Reply