ಕನ್ನಡ ರಾಜ್ಯೋತ್ಸವ ‌ಪ್ರಯುಕ್ತ ಮಕ್ಕಳಿಗೆ ಕನ್ನಡ ಗೀತೆ ಸ್ಪರ್ಧೆ ಕಾರ್ಯಕ್ರಮ

ರಾಜ್ಯ ಬಾಲಭವನ, ಜಿಲ್ಲಾ ಬಾಲಭವನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಜಿಲ್ಲಾ ಬಾಲಭವನದಲ್ಲಿ ದಿನಾಂಕ 1.11.2022 ರಂದು ಕನ್ನಡ ರಾಜ್ಯೋತ್ಸವ ‌ಪ್ರಯುಕ್ತ ಮಕ್ಕಳಿಗೆ ಕನ್ನಡ ಗೀತೆ ಸ್ಪರ್ಧೆ ಕಾರ್ಯಕ್ರಮ ನಡೆಸಲಾಯಿತು. ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಶರ್ಮಿಳಾ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಕ್ಕಳಿಗೆ ಶುಭ‌ಹಾರ್ಯಸಿದರು. ಹಾಗೂ ಮಕ್ಕಳಿಗೆ ಸಂಬಂಧಿತ ಕಾನೂನುಗಳ ಸಂಕ್ಷಿಪ್ತ ಮಾಹಿತಿ ಮತ್ತು ಲೋಕ ಅದಾಲತ್ ಕುರಿತು ಮಾಹಿತಿ ನೀಡುತ್ತಾ, ದಿ.31.10.2022 ರಿಂದ 13.11.2022ರವರೆಗೆ ನಡೆಯುವ ಸರಣಿ ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನ ದ ಕುರಿತು ಮಾಹಿತಿ ನೀಡಿದ ರು. ಮಹಿಳಾ ಮತ್ತು‌ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಉಪನಿರದೇಶಕರಾದ ವೀಣಾ ವಿವೇಕಾನಂದ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು..5 ರದ 15 ವರ್ಷದ. ಸುಮಾರು 70 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಜಿಲ್ಲಾ ಬಾಲಭವನದ ಕಾರ್ಯಕ್ರಮ ಸಂಯೋಜಕಿ ರಮ್ಯ ಸ್ವಾಗತಿಸಿ, ಕಛೇರಿ ಸಹಾಯಕಿ ಶ್ವೇತಾ ವಂದಿಸಿದರು.

 
 
 
 
 
 
 

Leave a Reply