ತಿರುಪತಿ ತಿರುಮಲನಿಗೆ 1 ಕೋಟಿ ರೂ. ದೇಣಿಗೆ ನೀಡಿದ ಮುಸ್ಲಿಂ ಕುಟುಂಬ!

ವಿಶ್ವದ ಅತಿ ಶ್ರೀಮಂತ ದೇವಸ್ಥಾನವೆಂದು ಖ್ಯಾತವಾಗಿರುವ ತಿರುಪತಿ ತಿರುಮಲ ದೇವಾಲಯಕ್ಕೆ ಭಕ್ತರು ಕೋಟಿ ಕೋಟಿ ಲೆಕ್ಕದಲ್ಲಿ ಕಾಣಿಕೆ ನೀಡುತ್ತಾರೆ.

ಇದೇ ವರ್ಷದ ಫೆಬ್ರವರಿಯಲ್ಲಿ ಚೆನ್ನೈ ಮೂಲದ ವ್ಯಕ್ತಿಯೊಬ್ಬರು ದೇವಾಲಯಕ್ಕೆ 9.2 ಕೋಟಿ ರೂ. ದೇಣಿಗೆ ನೀಡಿದ್ದು ಸುದ್ದಿಯಾಗಿತ್ತು.
ಇದೀಗ ಚೆನ್ನೈ ಮೂಲದ ಮುಸ್ಲಿಂ ದಂಪತಿ ಸುಬಿನಾ ಬಾನು ಮತ್ತು ಅವರ ಪತಿ ಅಬ್ದುಲ್ ಘನಿ ಕುಟುಂಬ ದೇವಸ್ಥಾನಕ್ಕೆ ಒಂದು ಕೋಟಿ ರೂ. ದೇಣಿಗೆ ನೀಡಿದ್ದು, ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮರೆಡ್ಡಿ ದೇಣಿಗೆಯನ್ನು ಔಪಚಾರಿಕವಾಗಿ ಸ್ವೀಕರಿಸಿ ,ಕುಟುಂಬಕ್ಕೆ ಧನ್ಯವಾದಗಳು ಮಾಧ್ಯಮ ವರದಿ ತಿಳಿಸಿದೆ.

Leave a Reply