ಕರಸೇವಕರಿಗೆ ಅಭಿನಂದನೆ 

ಉಡುಪಿ: ಹಿಂದೂ ಯುವ ಸೇನೆ ಉಡುಪಿ ಜಿಲ್ಲೆ ಮತ್ತು ಶ್ರೀ ಶಿವಾಪಂಚಾಕ್ಷರಿ ಭಜನಾ ಮಂದಿರ ಮಲ್ಪೆ ಇದರ ವತಿಯಿಂದ ಅಯೋಧ್ಯೆ ಶ್ರೀ ರಾಮ ಮಂದಿರದ ಭೂಮಿ ಪೂಜೆಯ ಅಂಗವಾಗಿ 1990ರಲ್ಲಿ ಅಯೋಧ್ಯೆಗೆ ಕರಸೇವಕರಾಗಿ ತೆರಳಿ ಸೇವೆ ಸಲ್ಲಿಸಿದ ಕರಾವಳಿಯ ಹೆಮ್ಮೆಯ ಹಿಂದೂ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸುವ ಮೂಲಕ ವಿಶಿಷ್ಟವಾಗಿ ಸಂಭ್ರಮಾಚಾರಣೆ ನಡೆಸಲಾಯಿತು.
ಕರ ಸೇವಕರಾಗಿ ಸೇವೆ ಸಲ್ಲಿಸಿದ ಶ್ರೀ ರಘುರಾಮ ಸುವರ್ಣ, ಶ್ರೀ ಮಾಧವ ಕರ್ಕೇರ, ಶ್ರೀ ಜಯಂತ ಪಡುಕೆರೆ, ಶ್ರೀ ರಮೇಶ್ ಅಮೀನ್ ಹಾಗೂ ಶ್ರೀ ಗುರುದಾಸ್ ಅಮೀನ್ ರನ್ನು ಸನ್ಮಾನಿಸಲಾಯಿತು. 
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ರಾದ ಶ್ರೀ ಯಶ್ ಪಾಲ್ ಸುವರ್ಣ, ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷರಾದ ಶ್ರೀ ಮಂಜು ಕೊಳ, ಶಿವಪಂಚಾಕ್ಷರಿ ಭಜನಾ ಮಂದಿರದ ಗೌರವಾಧ್ಯಕ್ಷರಾದ ಶ್ರೀ ಶೇಷಪ್ಪ ಸಾಲ್ಯಾನ್, ಅಧ್ಯಕ್ಷರಾದ ಶ್ರೀ ಶಂಕರ ಸುವರ್ಣ, ಕಾರ್ಯದರ್ಶಿ ಶ್ರೀ ದಿವಾಕರ ಸುವರ್ಣ, ಪ್ರಮುಖ ರಾದ ಶ್ರೀ ವಿಕ್ರಮ್ ಶ್ರೀಯಾನ್, ಶ್ರೀ ಮಿಥುನ್ ಕುಂದರ್, ಶ್ರೀ ರವಿ ಸಾಲ್ಯಾನ್ಶರತ್ ಕರ್ಕೇರ* ಮೊದಲಾದವರು ಉಪಸ್ಥಿತರಿದ್ದರು
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply