ಅಯ್ಯಪ್ಪ ಮಾಲಾಧಾರಿಯನ್ನು ನಿಂದಿಸಿದ ಮೀನು ವ್ಯಾಪಾರಿ ಇಕ್ಬಾಲ್.!!

ಬಂಟ್ವಾಳ: ವಾಹನದಲ್ಲಿ ಪಾರ್ಸೆಲ್ ನೀಡಲು ಬಂದಿದ್ದ ಅಯ್ಯಪ್ಪ ವೃತಧಾರಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವಬೆದರಿಕೆ ಹಾಕಿದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

ಬಿ.ಮೂಡ ಗ್ರಾಮದ ಗೂಡಿನಬಳಿ ನಿವಾಸಿ ಮೀನು ವ್ಯಾಪಾರಿ ಇಕ್ಬಾಲ್ ಎಂಬಾತನ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

ಯಶ್ಚಿತ್ ಎಂಬವರು ಅಯ್ಯಪ್ಪ ಮಾಲಾಧಾರಿಯಾಗಿದ್ದು, ಗೂಡಿನಬಳಿ ಸಮೀಪ ಪಾರ್ಸೆಲ್ ಒಂದನ್ನು ನೀಡಲು ತೆರಳಿದ ವೇಳೆ ಇಕ್ಬಾಲ್ ಇದು ನಮ್ಮ ಏರಿಯಾ, ಈ ಭಾಗಕ್ಕೆ ಹಿಂದೂಗಳು ಬರಬಾರದು ಎಂಬ ಮಾತನ್ನು ಹೇಳಿದ್ದಲ್ಲದೆ, ಅಯ್ಯಪ್ಪ ವೃತಧಾರಿಗಳ ಬಗ್ಗೆ ನಿಂದನೆಯ ಮಾತುಗಳನ್ನು ಆಡಿದ್ದಾನೆ. ಜೊತೆಗೆ ಜೀವಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.  ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 

Leave a Reply