“ಆಸಾಂಕ್ರಮಿಕ ರೋಗ ಜಾಗೃತಿ​ ಕಾರ್ಯಗಾರ

ಸಾಂಕ್ರಾಮಿಕ ರೋಗಗಳಿಗೆ​ ಕೊಡುತ್ತಿರುವಷ್ಟೇ​ ಪಾಮುಖ್ಯತೆಯನ್ನು​ ಅಸಾಂಕ್ರಮಿಕ ರೋಗಗಳಿಗೂನೀಡಿ…. ಡಾ.ವಾಸುದೇವ್

ಸಮುದಾಯ ವೈದ್ಯಕೀಯ ವಿಭಾಗ ಕೆ ಎಮ್ ಸಿ ಮಣಿಪಾಲ​ ಮತ್ತು ಜಿಲ್ಲಾ ಸರ್ವೇಕ್ಷಣಾ ಘಟಕ ಇವರ​ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಪ್ರಾಥಮಿಕ​ ಆರೋಗ್ಯ ಕೇಂದ್ರಗಳ  ವೈದ್ಯಾಧಿ ಕಾರಿಗಳು​ ಶುಶ್ರುಷಕ/​ ​ಕಿಯರಿಗೆ ಅಸಾಂಕ್ರಮಿಕ ರೋಗಗಳ​ ಜನಸಂಖ್ಯಾ ಆಧಾರಿತ ತಪಾಸಣೆ ವಿಷಯದ ಬಗ್ಗೆ ಜಿಲ್ಲಾ ಎನ್ ಸಿ ಡಿ​ ಘಟಕ ಮತ್ತು ಸಮುದಾಯ ವೈದ್ಯಕೀಯ ವಿಭಾಗದ​ ಜೊತೆಗೆ ​3 ದಿನದ ಕಾರ್ಯಾಗಾರ ಆಯೋಜಿಸಲಾಗಿದೆ.

ಈ ಕಾರ್ಯಾಗಾರದಲ್ಲಿ ಸ್ವಸಹಾಯ ಆಧಾರಿತ ಮೌಲ್ಯಮಾಪನ​ /ತಪಾಸಣೆ ಬಗ್ಗೆ ಸಂಕ್ಷಿಪ್ತ ದೃಷ್ಟಿಕೋನ ನೀಡಲಾಯಿತು.​ ಇತೀಚಿನ ದಿನಗಳಲ್ಲಿ ಅಸಾಂಕ್ರಾಮಿಕ ರೋಗಗಳಾದ​ ರಕ್ತದೊತ್ತಡ ಮಧುಮೇಹ ಕ್ಯಾನ್ಸರ್ ನಂತಹ​ ರೋಗಗಳು ಭಯಾನಕ ರೂಪ ಪಡೆಯುತ್ತಿದ್ದು​ ಪ್ರತಿವರ್ಷ ಇವುಗಳಿಂದ ಸಾವಿನ ಸಂಖ್ಯೆ ಸಾಂಕ್ರಮಿಕ​ ರೋಗಗಳಿ​ಗಿಂತಲೂ ವೇಗವಾಗಿ ಏರುತಿರುವುದು.

ಸಾಂಕ್ರಾಮಿಕ ರೋಗಗಳು ಬರುವುದನ್ನು​ ಕಂಡುಕೊಳ್ಳಬಹುದು. ಆದರೆ ಅಸಾಂಕ್ರಾಮಿಕರೋಗಗಳು ಯಾವಾಗ ಯಾರಿಗೆ ಬರುವುದು​ ​ತಿಳಿಯುದಿಲ್ಲ​. ಆದ್ದರಿಂದ ನಾವು ಸಾಂಕ್ರಾಮಿಕ ರೋಗಗಳಿಗೆ​ ಕೊಡುತ್ತಿರುವಷ್ಟೇ ಪಾಮುಖ್ಯತೆಯನ್ನು​ ಅಸಾಂಕ್ರಮಿಕ ರೋಗಗಳಿಗೂ ನೀಡ ಬೇಕಾಗಿದೆ ಎಂದು ಈ​ ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು.

ಈ ಕಾರ್ಯಾಗಾರದಲ್ಲಿ ಡಾ.ಶರತ್ ರಾವ್ ಡಿನ್ ಕೆ ಎಂ ಸಿ ಮಣಿಪಾಲ,​ ಡಾ.ಸುಮ ನಾಯರ್, ಡಾ.ಅವಿನಾಶ್ ಶೆಟ್ಟಿ ವೈದ್ಯಕೀಯ​ ಅಧಿಕ್ಷಕರು ಕಸ್ತೂರ್ಭಾ ಆಸ್ಪತ್ರೆ ಮಣಿಪಾಲ​ ಡಾ.ಮಂಜುನಾಥ್ ಹಂದೆ, ಡಾ.ಶಶಿಕಿರಣ್, ಡಾ.ಅರವಿಂದ್ ಪ್ರಭು,​ ಡಾ.ಸಹನಾ ಶೆಟ್ಟಿ, ಡಾ.ವಾಸುದೇವ್ ಭಟ್, ಮತ್ತು ಉಡುಪಿ ಜಿಲ್ಲಾ​ ಸರ್ವೇಕ್ಷಣ ಅಧಿಕಾರಿ ಡಾ.ವಾಸುದೇವ್ ಭಾಗವಹಿಸಿದರು.

ಈ ಕಾರ್ಯಾಗಾರವು ದಿನಾಂಕ ​12 , ​16 ಮತ್ತು ​17 ರಂದು​ ಡಾ.ಟ್.​ಎಂ. ಎ ಪೈ ಸಭಾಭವನ ಕೆ.ಎಮ್.ಸಿ ಮಣಿಪಾಲದಲ್ಲಿ​ ನಡೆಯುತಿದೆ. 

 
 
 
 
 
 
 
 
 
 
 

Leave a Reply