ಜೈ ದುರ್ಗಾ ಸಿಮ್ಮಿಂಗ್  ಕ್ಲಬ್ ಕಡೆಕಾರು ​ವತಿಯಿಂದ ​”​ಅರೇಬಿಯನ್ ಸೀ ಸ್ವಿಮ್ಮಿಂಗ್ ​~​2020​” ಆಯೋಜನೆ 

ಉಡುಪಿ ಜಿಲ್ಲೆಯ ಹೆಚ್ಚುವರಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ಜೈ ದುರ್ಗಾ ಸಿಮ್ಮಿಂಗ್ ಕ್ಲಬ್ ಕಡೆಕಾರು ಇವರು ಹಮ್ಮಿಕೊಂಡಿರುವ ಅರೇಬಿಯನ್ ಸೀ ಸ್ವಿಮ್ಮಿಂಗ್ :-2021 ರ  ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು​. 

ಇನ್ನೋರ್ವ ಮುಖ್ಯ ಅತಿಥಿ​ ​ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷ  ಕುಮಾರ್ ಚಂದ್ರ ಅವರು ಉಡುಪಿ ಜಿಲ್ಲೆಯಲ್ಲಿ ಇದೊಂದು ಅಭೂತಪೂರ್ವ ಸಾಹಸಮಯ ಈಜು ಕಾರ್ಯಕ್ರಮವನ್ನು ಗಂಗಾಧರ್ ಜಿ ಯವರು ಆಯೋಜಿಸಿರುವುದು  ಹೆಮ್ಮೆಯ ವಿಚಾರ, ಭಾಗವಹಿಸಿದ ಎಲ್ಲಾ ಈಜು ಪಟುಗಳು ಸಮುದ್ರದಲ್ಲಿ ಈಜಿ ಸಾಧನೆ ಮಾಡಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು​.
ಮಂಗಳೂರಿನ ರಾಷ್ಟ್ರೀಯ ಈಜುಪಟು ಸುದೇಶ್ ಶಾಸ್ತ್ರಿಯವರು ಉಡುಪಿಯಲ್ಲಿ ಆಯೋಜಿಸಿದ್ದ ಈ ಸಮುದ್ರ ಈಜು ಸ್ಪರ್ಧೆಗೆ ಕುರಿತು ಸಾಕಷ್ಟು ಮೆಚ್ಚುಗೆ  ಯನ್ನು ವ್ಯಕ್ತಪಡಿಸಿದರು, ಇವರೊಂದಿಗೆ ಮುಖ್ಯಅತಿಥಿಗಳಾಗಿ ಶಿವಕುಮಾರ್, ವಿಜಯ್ ತಿಂಗಳಾಯ, ಮಲ್ಲೇಶ್ ಕುಮಾರ್ ಮತ್ತಿತರು ಉಪಸ್ಥಿತರಿದ್ದರು.
 ಜೈ ದುರ್ಗಾ ಸಿಮೆಂಟ್ ​ಕ್ಲಬ್ ಮುಖ್ಯಸ್ಥ ಗಂಗಾಧರ್ ಜಿ ಅವರು ಪ್ರಾಸ್ತಾವಿ​ಸಿದರು, ಇದೇ ಸಂದರ್ಭದಲ್ಲಿ 24-01-2021ರಂದು ನಡೆದ ಇಂಡಿಯನ್ ಬುಕ್ ಆಫ್ ರೆಕಾರ್ಡ್ ನ ಮೂಲ ಪ್ರತಿಯನ್ನು ಗಂಗಾಧರ್ ಜಿ ಅವರಿಗೆ ಅತಿಥಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ರಾಜಶೇಖರ್ ಪಿ ಶಾಮರಾವ್ ನಿರೂಪಿಸಿದರು.
ನನ್ನ ಬಾಲ್ಯದ ಬಹುದಿನದ ದೊಡ್ಡ  ಕನಸಾಗಿರುವ ಸೈಂಟ್ ಮೇರಿಸ್ ​ನಿಂದ  ಮಲ್ಪೆ ಬೀಚ್ ತನಕ ಸಮುದ್ರದ ಅಲೆಗಳಿಗೆ ಮೈಯ್ಯೊಡ್ಡಿ  3:80 ಕಿಲೋಮೀಟರ್ ಸಮುದ್ರದಲ್ಲಿ ಸ್ವಿಮ್ಮಿಂಗ್ ​ಇಂದು ನನಸಾಯಿತು ~ ರಾಜಶೇಖರ್, ನ್ಯಾಯವಾದಿ & ಈಜುಪಟು  ​​
 
 
 
 
 
 
 
 
 
 
 

Leave a Reply