ಉಡುಪಿಯಲ್ಲಿ ನಾಳೆ {30.06.2021} ಲಸಿಕಾ ಲಭ್ಯತೆಯ ವಿವರ

ನಾಳೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಲಸಿಕೆ ಲಭ್ಯತೆ ಇಲ್ಲ 

ಜಿಲ್ಲೆಯಲ್ಲಿ ಕರೋನಾ ನಿಯಂತ್ರಣಕ್ಕೆ ಸಂಬಂಧಿಸಿ ಸರ್ಕಾರದ ಆದೇಶದನ್ವಯ 18 ರಿಂದ 44 ವರ್ಷ ವಯೋಮಾನ ದವರಲ್ಲಿ ಆದ್ಯತೆ ಗುಂಪುಗಳನ್ನು ಗುರುತಿಸಿ, ಕೋವಿಡ್ -19 ಲಸಿಕಾ ಕರಣವು ಸಮರೋಪಾದಿಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿದೆ. 

ದಿನಾಂಕ: 23.06.2021 ರ ಸರ್ಕಾರದ ಆದೇಶ ಸಂಖ್ಯೆ: ಎನ್.ಹೆಚ್.ಎಂ / ಡಿಡಿ / ಐಎಂಎಂ/2021-22 ರಲ್ಲಿ ರಾಜ್ಯಾದ್ಯಂತ ಶಾಲಾ ಕಾಲೇಜುಗಳು ಪ್ರಾರಂಭವಾಗುತ್ತಿರು ವುದರಿಂದ, ವಿದ್ಯಾರ್ಥಿಗಳಲ್ಲಿ ಆತ್ಮ ಸ್ದೈರ್ಯ ತುಂಬಲು ಕಾಲೇಜುಗಳು ಪ್ರಾರಂಭವಾಗುವ ಪೂರ್ವವಾಗಿ ಪದವಿ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕಾಕರಣ ನಡೆಸುವಂತೆ ತಿಳಿಸಲಾಗಿರುತ್ತದೆ.

ಆದರೆ ಉಡುಪಿ ಜಿಲ್ಲೆಯಲ್ಲಿ ವಾಸ್ತವ್ಯ ಹೊಂದಿ ಇತರ ಜಿಲ್ಲೆ / ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಾವು ವಾಸ್ತವ್ಯ ಹೊಂದಿರುವ ಉಡುಪಿ ಜಿಲ್ಲೆಯಲ್ಲಿಯೇ ಲಸಿಕಾಕರಣವನ್ನು ನಡೆಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಈ ಬಗ್ಗೆ ವಿವರಗಳನ್ನು ಸಂಗ್ರಹಿಸುವುದು ಅವಶ್ಯಕವಾಗಿದ್ದು, ಕೋವಿಡ್-19 ಲಸಿಕೆಯನ್ನು ಪಡೆಯಲಿಚ್ಚಿಸುವ ಉಡುಪಿ ಜಿಲ್ಲೆಯಲ್ಲಿ ವಾಸ್ತವ್ಯ ಹೊಂದಿ, ಅನ್ಯ ಜಿಲ್ಲೆ / ರಾಜ್ಯದಲ್ಲಿ ವ್ಯಾಸಂಗ ನಡೆಸುತ್ತಿರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ತಮ್ಮ ವಿವರಗಳನ್ನು ಈ ಕೆಳಗೆ ತಿಳಿಸಿರುವ ಲಿಂಕ್ ನಲ್ಲಿ ಭರ್ತಿ ಮಾಡಲು ಕೋರಲಾಗಿದೆ.

 
 
 
 
 
 
 
 
 
 
 

Leave a Reply