ಉಡುಪಿಯ ದತ್ತು ಸ್ವೀಕಾರ ಕೇಂದ್ರದಲ್ಲಿ 12 ಮಕ್ಕಳು, 9 ಸಿಬ್ಬಂದಿಗೆ ಕೋವಿಡ್

ಉಡುಪಿ: ಸಂತೆಕಟ್ಟೆ ಬಳಿ ಇರುವ ಮಕ್ಕಳ ದತ್ತು ಸ್ವೀಕಾರ ಕೇಂದ್ರ ಕೃಷ್ಣಾನುಗ್ರಹದ 0-14 ವರ್ಷದೊಳಗಿನ 12 ಮಂದಿ ಪುಟಾಣಿ ಮಕ್ಕಳು ಕೊರೋನ ಸೋಂಕಿಗೆ ಒಳಗಾಗಿದ್ದಾರೆ. ಆಶ್ರಮದ ಆಯಾ ಸೇರಿದಂತೆ ಒಂಭತ್ತು ಸಿಬ್ಬಂದಿ ಸಹ ಸೋಂಕಿಗೆ ಒಳಗಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಪಾಸಿಟಿವ್ ಪತ್ತೆಯಾಗಿರುವ ಎಲ್ಲಾ 21 ಮಂದಿಯನ್ನು ಕೃಷ್ಣಾನುಗ್ರಹ ಆಶ್ರಮದಲ್ಲೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿದಿನ ಎರಡು ಬಾರಿ ವೈದ್ಯರು ಬಂದು ಮಕ್ಕಳ ತಪಾಸಣೆ ನಡೆಸುತ್ತಿದ್ದಾರೆ. ಯಾರಲ್ಲೂ ರೋಗದ ಲಕ್ಷಣಗಳು ಕಂಡುಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಕೃಷ್ಣಾನುಗ್ರಹದಲ್ಲಿ ಒಟ್ಟು 29 ಮಂದಿ ಅನಾಥ, ವಿಕಲಚೇತನ ಹಾಗೂ ವಿಶೇಷ ಮಕ್ಕಳಿದ್ದು, 10 ಮಂದಿ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಇದರ ವರದಿ ಬುಧವಾರ ಬಂದಿದ್ದು, ಒಟ್ಟು 21 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಇದೀಗ ಇಡೀ ಕಟ್ಟಡವನ್ನು ಸೀಲ್‌ಡೌನ್ ಮಾಡಲಾಗಿದೆ.

ನೆಗೆಟಿವ್ ಬಂದಿರುವ 17 ಮಕ್ಕಳು ಹಾಗೂ ಇಬ್ಬರು ಸಿಬ್ಬಂದಿಗೆ ಧನ್ವಂತರಿ ನರ್ಸಿಂಗ್ ಕಾಲೇಜಿನಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ.

 
 
 
 
 
 
 
 
 
 
 

Leave a Reply