ಸ್ಟೆತೋಸ್ಕೋಪ್ ಆವಿಷ್ಕಾರದ  ಹಿಂದಿನ ಕತೆ~ಡಾ. ಜಗದೀಶ ಶೆಟ್ಟಿ 

ಬಹಳ ಹಿಂದೆ ಎದೆಯ ಮೇಲೆ ಕಿವಿಯಿಟ್ಟು,​ ​ಹೃದಯಬಡಿತ ಕೇಳುವ ಪರಿಪಾಠವಿತ್ತು.​ ​ಹೆಂಗಸರ ಹೃದಯ ಬಡಿತ ಕೇಳುವ ಸಂದರ್ಭದಲ್ಲಿ ಇದು ಕೆಲವು ವೈದ್ಯರಿಗೆ, ಯುವತಿಯರಿಗೆ,​ ​ಸಂಪ್ರದಾಯಬದ್ಧ ಹಿರಿಯರಿಗೆ ಮುಜುಗರ ಉಂಟುಮಾಡುತ್ತಿತ್ತು.​ ​ಪರೀಕ್ಷೆ ಮಾಡದೇ ಇರುವ ಹಾಗಿಲ್ಲ, ಪರೀಕ್ಷೆ ಮಾಡಿದರೆ ಹೀಗೆ!!!!.​ ​ಎಷ್ಟೋ ವೈದ್ಯರು ಈ ಗೊಂದಲಕ್ಕೆ ಬಿದ್ದು ಈ ವೃತ್ತಿಯಲ್ಲಿ ಮುಂದುವರಿಯುವುದನ್ನೇ ನಿಲ್ಲಿಸುವ ಮನಸ್ಸು ಮಾಡಿದ್ದರು.
 
ಅಂತಹ ವೈದ್ಯರಲ್ಲಿ ಫ್ರೆಂಚ್ ವೈದ್ಯ ರೆನೇ ಲೈನೇಕ್ ಕೂಡ ಒಬ್ಬ.​ ​ಒಮ್ಮೆ ರೆನೇ ಲೈನೇಕ್ ಒಂದು ಮರದ ಟೊಂಗೆಗೆ ಕಿವಿಯಾಂತು ಕುಳಿತ ಕಾಲಕ್ಕೆ ಹಕ್ಕಿಯ ಕೂಗೊಂದು ಮಧುರವಾಗಿ ಆತನ ಕಿವಿಗಳಿಗೆ ಕೇಳಿಸುತ್ತದೆ. ಎಲ್ಲಿಂದ ಬಂತು,​ ​ಎಲ್ಲಿದೆ ಹಕ್ಕಿ ಎಂದು ಹುಡುಕಾಡಿದಾಗ ಅದು ಅದೇ ಮರದ ಅವನಿರುವ ಜಾಗದಿಂದ ಅನತಿ ದೂರದ ಮತ್ತೊಂದು ಭಾಗದಲ್ಲಿತ್ತು.​ ​ಅರೇ ಶಬ್ದ ತರಂಗಗಳು ವಾಹಕಗಳ ಮೂಲಕ ಹೀಗೆ ಚಲಿಸುವಾಗ ಹೃದಯ​ ​ಬಡಿತ ಕೇಳಲು ನಾವೇಕೆ ನೇರವಾಗಿ ಕಿವಿಯಿಟ್ಟು ಕೇಳಬೇಕು..? ಎಂದು ಯೋಚನೆಗೆ ಬಿದ್ದ​. 
 
ಅದಕ್ಕೆ ಪೂರಕವಾಗಿ ಶಾಲಾ ಮಕ್ಕಳು ಅಂಗಳದಲ್ಲಿ ಉದ್ದದ ಕೋಲಿನೊಂದಿಗೆ ಕಿವಿಯಲ್ಲಿ ಕೇಳಿಸಿಕೊಳ್ಳುವ ಆಟವನ್ನು ಗಮನಿಸಿದ,​ ​ಆ ಕುರಿತಂತೆ ಪ್ರಯೋಗಶೀಲನೂ ಆದ.​ ​ತಾನು ಸ್ವತಃ ಸಂಗೀತಗಾರ ಅದರಲ್ಲೂ ಅದ್ಭುತ ಕೊಳಲು ವಾದಕನಾಗಿದ್ದ ಕಾರಣ ಆ ಕೊಳಲನ್ನೇ ಪ್ರಯೋಗದ ವಸ್ತುವಾಗಿ ಬಳಸಿಕೊಂಡ. ನಳಿಕೆಯುಳ್ಳ ಯಂತ್ರವೊಂದರ ಮೂಲಕ ಹೃದಯದಬಡಿತ ಕೇಳುವ ಪರಿಪಾಠಕ್ಕೆ 1816 ರಲ್ಲಿ ನಾಂದಿ ಹಾಡಿದ. ಎದೆಯ ಮೇಲೆ ಇಟ್ಟು ಕೇಳುವ ಯಂತ್ರವಾದ ಕಾರಣ chest scope ಅಂತನೂ ಅದೇ ಮುಂದುವರಿದು ಮುಂದೆ stethoscope ಅಂತನೂ ಪ್ರಸಿದ್ಧಿ ಪಡೆಯಿತು..
 
851 ರ ಬಳಿಕ ಎರಡು ನಳಿಕೆಯುಳ್ಳ,ಎರಡೂ ಕಿವಿಗೆ ಹಾಕಿಕೊಳ್ಳುವ ಸ್ಟೆತೋಸ್ಕೋಪ್ ಬಳಕೆಗೆ ಬಂದಿತು.ಒಂದೊಮ್ಮೆ ಆತ ಇದನ್ನು ಕಂಡುಹಿಡಿಯದೇ ಹೋಗಿದ್ದರೇ 90% ಹುಡುಗರು ಕುತೂಹಲಕ್ಕಾದರೂ ಇಂದು ವೈದ್ಯರಾಗಿರುತ್ತಿದ್ದರು!!!​​
 
 
 
 
 
 
 
 
 
 
 

Leave a Reply