ದಂಡ ಪ್ರಮಾಣ ಇಳಿಕೆ ಮಾಡಿದ​ ​ರಾಜ್ಯ ಸರ್ಕಾರ ​​ 

ಬೆಂಗಳೂರು: ಕರೋನ ಮಾರ್ಗಸೂಚಿಯಂತೆ ಮಾಸ್ಕ್​ ಧರಿಸದೆ ರಸ್ತೆಗಿಳಿಯುತ್ತಿದ್ದವರಿಗೆ ವಿಧಿಸುತ್ತಿದ್ದ ದಂಡದ ಪ್ರಮಾಣವನ್ನು ಇಳಿಕೆ ಮಾಡಿ ತಕ್ಷಣಕ್ಕೆ ಜಾರಿಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.​ ವಿಶ್ವದಾದ್ಯಂತ ಕರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹಾಗಾಗಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್​ ಧರಿಸುವುದು ಕಡ್ಡಾಯ, ಹೀಗಿದ್ದರೂ ಹಲವರು ಉಡಾಫೆ ಮಾಡುತ್ತಿದ್ದರು. 
 
ಮಾಸ್ಕ್​ ಹಾಕದವರಿಗೆ ನಗರದಲ್ಲಿ 200, ಗ್ರಾಮೀಣ ಭಾಗದಲ್ಲಿ 100 ರೂ. ದಂಡ ವಸೂಲಿ ಮಾಡುತ್ತಿದ್ದರೂ ಬಹುತೇಕರು ಕರೊನಾ ನಿಯಮ ಪಾಲಿಸುತ್ತಿಲ್ಲ. ಹಾಗಾಗಿ ದಂಡದ ಮಿತಿಯನ್ನು ನಾಲ್ಕು ಪಟ್ಟು ಅಧಿಕವಾಗಿಸಿ, ನಗರದಲ್ಲಿ 1,000 ರೂ. ಗ್ರಾಮೀಣ ಭಾಗದಲ್ಲಿ 500 ರೂಪಾಯಿ ವಸೂಲಿ ಮಾಡುವ ಮೂಲಕ ಸರ್ಕಾರ ಜನರಿಗೆ ಎಚ್ಚರಿಕೆ ನೀಡಿತ್ತು.

ಇನ್ನು ಸರ್ಕಾರದ ನಿರ್ದೇಶನದಂತೆ ಮಾರ್ಷಲ್ಸ್​ ಮತ್ತು ಪೊಲೀಸರು ಮಾಸ್ಕ್​ ಹಾಕದವರಿಂದ ದಂಡ ಪಡೆಯುತ್ತಿದ್ದಾರೆ. ಅಧಿಕ ದಂಡದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಣೆ ಎದುರಾಗಿತ್ತು. ಮಾಸ್ಕ್ ಧರಿಸದೆ ತಪ್ಪು ಮಾಡಿದ್ರೆ ದಂಡ ಪಾವತಿಸುತ್ತೇವೆ. ಆದರೆ ಸಾವಿರ ರೂ. ಕೊಡಲಾಗು ವುದಿಲ್ಲ, ದಂಡದ ಪ್ರಮಾಣ ಕಡಿಮೆ ಮಾಡಿ, ಅಥವಾ ಒಂದು ಮಾಸ್ಕ್ ಕೊಟ್ಟು ಬುದ್ಧಿ ಹೇಳಿ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
​​
ಅಂತೂ ಇಂತೂ ಜನರ ಆಗ್ರಹಕ್ಕೆ ಮಣಿದ ಸಿಎಂ ಬಿ.ಎಸ್​.ಯಡಿಯೂರಪ್ಪ, ದಂಡದ ಪ್ರಮಾಣ ಕಡಿಮೆ ಮಾಡಿದ್ದಾರೆ. ನಗರದಲ್ಲಿ 1000 ರೂ. ದಂಡದಿಂದ 250 ರೂ.ಗೆ ಕಡಿಮೆ ಮಾಡಿದ್ದು, ಗ್ರಾಮೀಣ ಪ್ರದೇಶದಲ್ಲಿ 500 ರೂಪಾಯಿಂದ 100 ರೂಪಾಯಿಗೆ ದಂಡದ ಹಣವನ್ನು ಇಳಿಕೆ ಮಾಡಿ ಬುಧವಾರ ಮಧ್ಯಾಹ್ನ ಆದೇಶ ಹೊರಡಿಸಿದ್ದಾರೆ.

 
 
 
 
 
 
 
 
 
 
 

Leave a Reply