ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಗ್ರಂಥ ಪಾಲಕರ ದಿನಾಚರಣೆ

“ಗ್ರಂಥಾಲಯ ಕ್ಷೇತ್ರಕ್ಕೆ ಪದ್ಮಶ್ರೀ ಡಾ. ಎಸ್.ಆರ್.ರಂಗನಾಥನ್ ಪಂಚ ಸೂತ್ರಗಳನ್ನು ನಿರ್ಮಿಸಿ ಗ್ರಂಥಗಳ ಸಮರ್ಪಕ ಬಳಕೆಗೆ ಕೊಲಾನ್ ವರ್ಗೀಕರಣ ಪದ್ಧತಿ ಅಳವಡಿಸಿವುದರ ಮೂಲಕ ವಿಶ್ವ ಮಾನ್ಯತೆಯನ್ನು ಗಳಿಸಿದರು ಎಂದು ಪೂರ್ಣಪ್ರಜ್ಞ ಕಾಲೇಜಿನ ಗ್ರಂಥಪಾಲಕರಾದ ಡಾ. ವಿನಯ್ ಕುಮಾರ್ ಅವರು ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪದ್ಮಶ್ರೀ ಡಾ. ಎಸ್.ಆರ್.ರಂಗನಾಥನ್‌ರವರ 129ನೇ ಹುಟ್ಟು ಹಬ್ಬದ ಸಲುವಾಗಿ ಆಚರಿಸಿದ ಗ್ರಂಥಪಾಲಕರ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು ಮತ್ತು ಪಂಚ ಸೂತ್ರಗಳಲ್ಲಿ ಎರಡನೇಯ ಸಿದ್ಧಾಂತವಾದ ಪ್ರತಿಯೊಬ್ಬ ಓದುಗನಿಗೂ ಅವರದ್ದೇ ಆದ ಪುಸ್ತಕ”ಎಂಬುವುದರ ಬಗ್ಗೆ ವಿವರವಾಗಿ ಮಾತನಾಡಿದರು. 

ಈ ಸಮಾರಂಭದ ಅಧ್ಯಕ್ಷತೆಯನ್ನು ಪಿ.ಐ.ಎಂ ಸಂಸ್ಥೆಯ ನಿರ್ದೇಶಕರಾದ ಡಾ. ಭರತ್‌ರವರು ವಹಿಸಿದ್ದರು.. ಸಂಸ್ಥೆಯ ಗ್ರಂಥ ಪಾಲಕರಾದ ಪುರುಷೋತ್ತಮ ಗೌಡ ಪಿ.ಸಿ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಈ ಕಾರ್ಯಕ್ರಮದಲ್ಲಿಪಿ.ಐ.ಎಂನ ಎಂ.ಬಿ.ಎ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು,
ಶಿಕ್ಷಕೇತರರು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply