ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ ರಾಜ್ಯಮಟ್ಟದ ಸಮ್ಮೇಳನ.

ಸಂಖ್ಯಾಶಾಸ್ತ್ರದ ತತ್ವ ಉಳಿದ ವಿಜ್ಞಾನ ವಿಷಯಗಳಿಗಿಂತ ವಿಭಿನ್ನವಾಗಿದೆ. ಗಣಕ ಕ್ಷೇತ್ರದಲ್ಲಿ ನೂತನ ಸಾಫ್ಟ್ವೇರ್‌ಗಳ ಅನ್ವೇಷಣೆಯಲ್ಲಿ ಇದರ ಪಾತ್ರ ಅಪಾರವಾಗಿದೆ ಎಂದು ಪ್ರೊ. ರಾಜ್‌ಮೋಹನ್ ರವರು ಶ್ಯಾಮಿಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಹೇಳಿದರು. 
ಅವರು ಶುಕ್ರವಾರ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗವು ಆಯೋಜಿಸಿದ್ದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ಸರಕಾರ ಪ್ರಾಯೋಜಿತ ವಿಜ್ಞಾನದಲ್ಲಿ ಸಂಖ್ಯಾಶಾಸ್ತ್ರೀಯ ಸಂಶೋಧನೆ ಎಂಬ ಎರಡು ದಿನಗಳ ರಾಜ್ಯಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
 
ಸಂಖ್ಯಾಶಾಸ್ತ್ರದ ಅರಿವಿನಿಂದ ಮಾತ್ರ ಸಂಶೋಧನೆಯ ವಿಶ್ಲೇಷಣೆ ಸಾಧ್ಯ ಎಂದು ಡಾ. ಜಿ. ಎಸ್. ಚಂದ್ರಶೇಖರ್ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರು ಡಾ. ರಾಘವೇಂದ್ರ ಎ. ಅಧ್ಯಕ್ಷತೆ ವಹಿಸಿದ್ದರು. ಡಾ. ಶ್ರೀಮತಿ ಮಯ್ಯ, ಡಾ. ವಾಣಿಲಕ್ಷ್ಮೀ ಮತ್ತು ಶ್ರೀ ನಿತಿನ್ ನಾಯಕ್ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.
 ಸಂಖ್ಯಾಶಾಸ್ತ್ರದ ವಿಭಾಗದ ಮುಖ್ಯಸ್ಥೆ ಶ್ರೀಮತಿ ಧನ್ಯ ಸ್ವಾಗತಿಸಿದರು. ಉಪನ್ಯಾಸಕ ಶ್ರೀ ರಾಕೇಶ್ ವಂದಿಸಿದರು. ಉಪನ್ಯಾಸಕಿ ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. 
 
 
 
 
 
 
 
 
 
 
 

Leave a Reply