ಯೋಗ ಪತಂಜಲಿ ಯೋಗ ಸಮಿತಿಯಿಂದ ಸಾಮೂಹಿಕ 108 ಸೂರ್ಯ ನಮಸ್ಕಾರ

ಪತಂಜಲಿ ಯೋಗ ಪೀಠ ಹರಿದ್ವಾರ ಯೋಗ ಪತಂಜಲಿ ಯೋಗ ಸಮಿತಿ ಉಡುಪಿ ವತಿಯಿಂದ ಇಂದು ಸೋಮವಾರ ರಥ​ ​ಸಪ್ತಮಿ  ಹಾಗೂ 75ನೇ ಸ್ವಾತಂತ್ರ ಅಮೃತಮಹೋತ್ಸವಕ್ಕೆ 75 ಕೋಟಿ ಸೂರ್ಯನಮಸ್ಕಾರಕ್ಕೆ ವಿಶ್ವದಾಖಲೆ  ಪ್ರಯುಕ್ತ ಮಥುರ ಕಂಫರ್ಟ್ಸ(ಶ್ರೀಕೃಷ್ಣ ಮಠದ ಪಾರ್ಕಿಂಗ್ ಹತ್ತಿರ) ನಲ್ಲಿ ಸಾಮೂಹಿಕ 108 ಸೂರ್ಯ​ ​ನಮಸ್ಕಾರ ಮಾಡಲಾಯಿತು. 
ಬಹುಸಂಖ್ಯೆಯಲ್ಲಿ ಯೋಗ ಬಂಧುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.  ವೇದಿಕೆಯಲ್ಲಿ ಯೋಗ ಗುರುಗಳಾದ  ಶ್ರೀಮತಿ ಲೀಲಾ ಅಮೀನ್,  ತೇಜಪ್ಪ ಬಂಗೇರ, ಸದಾನಂದ ರಾವ್,  ಜಗದೀಶ್,  ಸದಾನಂದ ಜಿ ಟಿ ಅಮೀನ್,  ನಾಗರಾಜ್ ಶೇಟ್  ಉಪಸ್ಥರಿದ್ದರು​.
 
 
 
 
 
 
 
 
 
 
 

Leave a Reply