ಪರಿಚಯ ಪಾಂಬೂರು – ರಾಷ್ಟ್ರೀಯ ರಂಗೋತ್ಸವ 2023 ಸಮಾರೋಪ

ಶಿರ್ವ: ವ್ಯವಸ್ಥೆಯ ವಿರುದ್ಧ ರಾಜಿ ಮಾಡಿಕೊಳ್ಳದೆ ದೃಢವಾಗಿ ನಿಲ್ಲುವ ಇತಿಹಾಸ ಹೊಂದಿರುವ ರಂಗಪ್ರಸ್ತುತಿಗಳು ಅಂತ:ಕರಣದ ಅಭಿವ್ಯಕ್ತಿ ಎಂದು ನಿವೃತ್ತ ಪ್ರಾಧ್ಯಾಪಕ ರಂಗವಿಮರ್ಶಕ ಫಣಿರಾಜ್ ನುಡಿದರು.

ಅವರು ರಂಗ ಪರಿಚಯ – ಪರಿಚಯ ಬಯಲು ರಂಗಮoದಿರ “ಪ್ರಕೃತಿ” ಪಾಂಬೂರು ಇಲ್ಲಿ ಜರುಗಿದ ೭ದಿನಗಳ ಕನ್ನಡ,ತುಳು, ಕೊಂಕಣಿ, ಬುಂದೇಲಿ, ಹಿಂದಿ ಭಾಷೆಗಳ ನಾಟಕಗಳ ಪ್ರದರ್ಶನಗಳನ್ನೊಳಗೊಂಡ “ರಾಷ್ಟ್ರೀಯ ರಂಗೋತ್ಸವ -2023” ಇದರ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ, ರಂಗಭೂಮಿ ದೇಶೀಯತೆ, ಸಹನಶೀಲತೆಯನ್ನು ಬೆಳೆಸುತ್ತದೆ. ದೇಶೀಯತೆಯ ಸಮಾಗಮ ಇಲ್ಲಿ ಆಗುತ್ತದೆ. ನಮ್ಮ ದೇಶಿಯತೆಯನ್ನು ಇತರರಿಗೆ ಪರಿಚಯಿಸುವುದು, ಹಾಗೂ ಇತರ ದೇಶೀಯತೆಯನ್ನು ನಾವು ಕಲಿಯುತ್ತೇವೆ ಎಂದರು.

ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ ಮಾನಸಿಕವಾಗಿ ಬದ್ದತೆ ಇರಬೇಕಾದರೆ ಕಲೆ, ಸಂಸ್ಕೃತಿಯ ವಾತಾವರಣ ಇರಬೇಕು. ಸಾಂಸ್ಕೃತಿಕ ಕಾರ್ಯಗಳು, ವೈವಿದ್ಯತೆಗಳು ಹೆಚ್ಚಾಗಿ ಇರುವಲ್ಲಿ ಉತ್ತಮ ವಾತಾವರಣ ನಿರ್ಮಾಣ ಆಗುತ್ತದೆ ಎಂದರು. ಮಂಗಳೂರು ಸೈಂಟ್ ಎಲೋಸಿಯಸ್ ಕಾಲೇಜಿನ ಪ್ರಾಚಾರ್ಯ ವಂ.ಪ್ರವೀಣ್ ಮಾರ್ಟಿಸ್ ಮಾತನಾಡಿ ಉತ್ತಮ ಪರಿಸರ ನಿರ್ಮಾಣದ ಮೌನಕ್ರಾಂತಿ ಈ ಪರಿಸರದಲ್ಲಿ ಆಗುತ್ತಿದೆ. ಪರಿಸರದಲ್ಲಿ ಪರಿವರ್ತನೆ ತರುವಲ್ಲಿ ಇದು ಯಶಸ್ವಿಯಾಗಲಿ ಎಂದು ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪರಿಚಯ ಪ್ರತಿಷ್ಠಾನ(ರಿ) ಪಾಂಬೂರು ಇದರ ಅಧ್ಯಕ್ಷ ಅನಿಲ್ ಡೇಸಾ ವಹಿಸಿ ಮಾತನಾಡಿ, ಏಳುದಿನಗಳ ರಾಷ್ಟ್ರೀಯ ರಂಗೋತ್ಸವದ ಯಶಸ್ಸಿಗೆ ಸಹಕರಿಸಿದರವರಿಗೆ ಕೃತಜ್ಞತೆ ಸಲ್ಲಿಸಿದರು. ಸಂಸ್ಥೆಯ ಆಡಳಿತ ಟ್ರಸ್ಟಿ ಡಾ.ವಿನ್ಸೆಂಟ್ ಆಳ್ವ ಪ್ರಸ್ತಾವನೆಯೊಂದಿಗೆ ಪರಿಚಯ ಸಂಘಟನೆಯ ಆಶಯ ತಿಳಿಸಿ ಸ್ವಾಗತಿಸಿದರು. ಕೋಶಾಧಿಕಾರಿ ಐವನ್ ಪೀಟರ್ ವೊಸ್ಟಾ ದಾನಿಗಳನ್ನು ಪರಿಚಯಿಸಿದರು. ಟ್ರಸ್ಟಿಗಳಾದ ಇಗ್ನೇಷಿಯಸ್ ಡಿಸೋಜ, ಲೂಕಾಸ್ ಡಿಸೋಜ ದಾನಿಗಳನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪರಿಚಯ ಬಯಲು ರಂಗಮoದಿರ ನಿರ್ಮಾಣಕ್ಕೆ ಸ್ಥಳದಾನ ಮಾಡಿದ ಮೇರಿ ನೊರೋನ್ಹಾರವರನ್ನು ಕೃತಜ್ಞತಾಪೂರ್ವಕವಾಗಿ ಸನ್ಮಾನಿಸಲಾಯಿತು. ಆಟಮಾಟ(ರಿ) ಸಾಂಸ್ಕೃತಿಕ ಪಥ, ಧಾರವಾಡ ಇದರ ರಂಗ ನಿರ್ದೇಶಕ ಮಹಾದೇವ ಹಡಪದ ಇವರನ್ನು ಟ್ರಸ್ಟಿ ಬಿ.ಪುಂಡಲೀಕ ಮರಾಠೆ ಸನ್ಮಾನಿಸಿದರು. ಟ್ರಸ್ಟಿ ಸರಿತಾ ಆಳ್ವ ನಿರೂಪಿಸಿದರು. ಪ್ರಿಯಾಂಕಾ ನೊರೋನ್ಹಾ ಸಹಕರಿಸಿದರು. ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್ ನೊರೋನ್ಹಾ ಧನ್ಯವಾದವಿತ್ತರು. ನಂತರ ಆಟಮಾಟ(ರಿ) ಸಾಂಸ್ಕೃತಿಕ ಪಥ, ಧಾರವಾಡ ತಂಡದಿoದ “ಗುಡ್ಡದ ಹಾಡು” ಕನ್ನಡ ನಾಟಕ ಪ್ರದರ್ಶನಗೊಂಡಿತು.

 
 
 
 
 
 
 
 
 
 
 

Leave a Reply