ಶ್ರೀರಾಮ-ಹನುಮದುತ್ಸವದ ಪ್ರಯುಕ್ತ ರಾಜಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ಉಡುಪಿ: ಶ್ರೀಕೃಷ್ಣಮಠ ರಾಜಾಂಗಣದ ನರಸಿಂಹತೀರ್ಥ ವೇದಿಕೆಯಲ್ಲಿ, ಪರ್ಯಾಯ ಶ್ರೀಅದಮಾರು ಮಠದ ಆಶ್ರಯದಲ್ಲಿ,15 ದಿನಗಳ ಪರ್ಯಂತ ನಡೆಯುತ್ತಿರುವ “ಶ್ರೀರಾಮ ಹನುಮದುತ್ಸವ”ದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಇಂದು ಹಲವಾರು ಕಾರ್ಯಕ್ರಮಗಳು ನಡೆಯಿತು.

 ಪರ್ಯಾಯ ಪೀಠಾಧೀಶರಾದ ಶ್ರೀ ಈಶ ಪ್ರಿಯ ತೀರ್ಥರಿಂದ ಪ್ರವಚನ, ಗಂಜೀಫಾ ರಘುಪತಿ ಭಟ್ ರಿಂದ ಪರದೆಯಲ್ಲಿ ಚಿತ್ರ ರಚನೆ, ವಿದುಷಿ ಲಕ್ಷ್ಮೀ ಗುರುರಾಜ್ ಮತ್ತು ತಂಡದವರಿಂದ ಭರತನಾಟ್ಯ ಹಾಗೂ ಬನ್ನಂಜೆ ಸಂಜೀವ ಸುವರ್ಣ ಮತ್ತು ತಂಡದವರಿಂದ ಯಕ್ಷಗಾನಗಳ ಸಮ್ಮಿಲನದೊಂದಿಗೆ “ರಾಮಗುಣಾದರ್ಶ” ಎಂಬ ಪ್ರದರ್ಶನ ನಡೆಯಿತು.

 
 
 
 
 
 
 
 
 
 
 

Leave a Reply