ವೈದ್ಯಳಾಗುವ ಕನಸಿನ ವಿದ್ಯಾರ್ಥಿನಿಗೆ ಸೋಲಾರ್ ದೀಪದ ನೆರವು

ಉಡುಪಿ: ಇಂದು ಸರಕಾರಿ ಪ ಪೂ ಕಾಲೇಜಿನಲ್ಲಿ ವಳಕಾಡು ಸರಕಾರಿ ಪ್ರೌಢ ಶಾಲೆ ಎಸ್ ಎಸ್ ಎಲ್ ಸಿ ತರಗತಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿನಿ ನೇತ್ರಾವತಿಗೆ ಸೋಲಾರ್ ದೀಪ ನೀಡಲಾಯಿತು.

ನೇತ್ರಾವತಿಯ ತಂದೆ ಯಮನಪ್ಪ, ತಾಯಿ ಗಂಗವ್ವ, ಮಾರ್ಪಳ್ಳಿ, ಜಗನ್ನಾಥ ನಗರದ ಒಂದು ಪತ್ರಾಸ ಪುಟ್ಟ ಕೊಠಡಿಯಲ್ಲಿ ವಾಸವಾಗಿದ್ದಾರೆ. ಈ ಕೊಠಡಿಗೆ ವಿದ್ಯುತ್ ದೀಪದ ವ್ಯವಸ್ಥೆ ಇದ್ದಿಲ್ಲ. ವಿದ್ಯಾರ್ಥಿನಿ ನೇತ್ರಾವತಿ ಕಂದೀಲು ದೀಪದ ಬೆಳಕಿನಲ್ಲಿ ಓದುತ್ತಿರುವುದನ್ನು ಶಾಲೆಯ ಮುಖ್ಯ ಶಿಕ್ಷಕಿ ನಿರ್ಮಲಾ ಮೇಲಾಧಿಕಾರಿಗಳ ಗಮನಕ್ಕೆ ತಂದರು. ಈ ವಿಷಯ ಶಿಕ್ಷಣಾಧಿಕಾರಿ ಜಾಹ್ನವಿ ಸಿ ಅವರ ಹತ್ತಿರದ ಸಂಬಂಧಿ ಡಾ.ವಿಜಯಾ ಅವರಿಗೆ ತಿಳಿಸಿದರು. ಆಗ ವೈದ್ಯೆ ಡಾ. ವಿಜಯಾ ಅವರು ತಕ್ಷಣವೇ ಮೂರು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸೋಲಾರ ದೀಪ ದೇಣಿಗೆ ನೀಡುವ ವಾಗ್ಧಾನ ಮಾಡಿದರು. ಅವರ ವಾಗ್ಧಾನದಂತೆ ಇಂದು‌ ಸೋಲಾರ್ ದೀಪ ನೀಡಿ ನೀನೂ ಚೆನ್ನಾಗಿ ಓದಿ ಡಾಕ್ಟರ್ ಆಗು. ಮುಂದೆ ನೀನೂ ಸಹ ಹಲವು ಮಕ್ಕಳ ಕಲಿಕೆಗೆ ಇದೇ ರೀತಿ ಸಹಾಯ‌ ಮಾಡು. ಅಂತಹ ಶಕ್ತಿ ನಿನಗೆ ದೇವರು ದಯಪಾಲಿಸಲೆಂದು ಹರಸಿದರು.

 ಉಡುಪಿಯ ಡಿಡಿಪಿಐ ಶ್ರೀ ಎನ್.ಎಚ್.ನಾಗೂರ, ಶಿಕ್ಷಣಾಧಿಕಾರಿ ಜಾಹ್ನವಿ ಸಿ. ಸೋಲಾರ ದೀಪದ ದಾನಿಗಳು ಡಾ.ವಿಜಯಾ, ಶಾಲಾ ಮುಖ್ಯ ಶಿಕ್ಷಕಿ ನಿರ್ಮಲಾ ಹಾಗೂ ವಿದ್ಯಾರ್ಥಿನಿಯ‌ ತಾಯಿ ಗಂಗಮ್ಮ, ಹಾಜರಿದ್ದರು.

 

 
 
 
 
 
 
 
 
 
 
 

Leave a Reply