ದಿವ್ಯಾಂಗರಿಗೆ ಮತ್ತು ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಸಹಾಯ ಮಾಡುವಕೆಲಸ ದೇವರ ಸೇವೆ ಮಾಡಿದಂತೆ ~ ವೇಣು ಭಾನುಮೂರ್ತಿ ರೆಡ್ಡಿ

ದಿವ್ಯಾಂಗರಿಗೆ ಮತ್ತು ಭಿನ್ನ ಸಾಮರ್ಥ್ಯದ ಮಕ್ಕಳಿಗೆ ನೀವು ಮಾಡುತ್ತಿರುವ ಸಹಾಯ ದೇವರ ಸೇವೆ ಮಾಡಿದಂತೆ. ಶಾಶ್ವತ ಯೋಜನೆಗಳನ್ನು ಮಾಡಿ ನಿರಂತರ ಸಹಾಯ ಹಸ್ತ ಚಾಚುವ ಕೆಲಸ ಈ ಕ್ಲಬ್ಬಿನ ಮೂಲಕ ಆಗಲಿ ಎಂದು ಲಯನ್ಸ್ ಮಲ್ಟಿಪಲ್ ಜಿಲ್ಲೆ ಯ ಚೇರ್ಮನ್ ವೇಣು ಭಾನುಮೂರ್ತಿ ರೆಡ್ಡಿ ಯವರು ತಿಳಿಸಿದರು.

ಅವರು ಉಡುಪಿಯ ಅಮೃತ್ ಗಾರ್ಡನ್ ನಲ್ಲಿ ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ಯ 2021-22 ನೇ ಸಾಲಿನ ಪದಪ್ರಧಾನ ಸಮಾರಂಭ ನೆರವೇರಿಸಿ ಮಾತನಾಡಿದರು.

ಅವರು ನೂತನ ಅಧ್ಯಕ್ಷ ಮನೋಹರ್ ಶೆಟ್ಟಿ ತೋನ್ಸೆ ಮತ್ತು ಪದಾಧಿಕಾರಿಗಳ ತಂಡಕ್ಕೆ ಜವಾಬ್ದಾರಿಗಳನ್ನು ತಿಳಿಸಿ ಪ್ರಮಾಣ ವಚನ ಬೋಧಿಸಿದರು. ನಿವೃತ್ತ ಯೋಧ ಕ್ಯಾಪ್ಟನ್ ಗೋಪಾಲಕೃಷ್ಣ ಪ್ರಭು, ಕೃಷಿ ಕ್ಷೇತ್ರದ ವಿಶೇಷ ಸಾಧನೆ ಗಾಗಿ ಅಲೆನ್ ಲೂಯಿಸ್, ಅನುಪಮ ವೈದ್ಯಕೀಯ ಸೇವೆಗಾಗಿ ಡಾ. ಸುರೇಂದ್ರ ಶೆಟ್ಟಿ ಅವರನ್ನು ಅಭಿನಂದಿಸ ಲಾಯಿತು. 

ಮಾಜಿ ಜಿಲ್ಲಾ ಗವರ್ನರ್ ಜಯಕರ್ ಶೆಟ್ಟಿ ಇಂದ್ರಾಳಿ, ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ,  ಖಜಾಂಚಿ ರತ್ನಾಕರ ಶೆಟ್ಟಿ, ಜಿಲ್ಲಾ ಲಿಯೋ ಕೋಆರ್ಡಿನೇಟರ್ ಮಹಮ್ಮದ್ ಮೌಲಾ, ಜಿಲ್ಲಾ ಲಿಯೋ ಅಧ್ಯಕ್ಷ ಜಾಯ್ ಫೆರ್ನಾಂಡಿಸ್, ಲಿಯೋ ಪದಾಧಿಕಾರಿಗಳಾದ ಧೃವ್, ಧೃತಿ, ವಿಜ್ಞಾನ್, ನಿಧಿ ಉಪಸ್ಥಿತರಿದ್ದರು.
ರತ್ನಾಕರ್ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿ, ನಿರ್ಗಮನ ಅಧ್ಯಕ್ಷ ಮತ್ತು ವಲಯಾಧ್ಯಕ್ಷ ಹೃಷಿಕೇಶ್ ಹೆಗ್ಡೆ ಸ್ವಾಗತಿಸಿ, ಕಾರ್ಯದರ್ಶಿ ಚಂದ್ರಶೇಖರ್ ರಾ​​ವ್ ವಂದಿಸಿದರು.​​
 
 
 
 
 
 
 
 
 
 
 

Leave a Reply