ಗಣೇಶ್ ಗಂಗೊಳ್ಳಿ ಇವರಿಗೆ ‘ಕರ್ನಾಟಕ ಜಾನಪದ ಭೂಷಣ ರಾಜ್ಯ ಪ್ರಶಸ್ತಿ

ಉಪ್ಪುಂದ: ಖ್ಯಾತ ಜಾನಪದ ಗಾಯಕ,ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಇದರ ಜಿಲ್ಲಾಧ್ಯಕ್ಷ ಗಣೇಶ್ ಗಂಗೊಳ್ಳಿಗೆ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಬೀದರ್ ವತಿಯಿಂದ ರಾಜ್ಯ ಮಟ್ಟದ ” ಕರ್ನಾಟಕ ಜಾನಪದ ಭೂಷಣ ರಾಜ್ಯ ಪ್ರಶಸ್ತಿ ” ಯನ್ನು ಬೀದರಿನ ಖ್ಯಾತ ಸಾಹಿತಿ ಡಾ| ಎಂ.ಜಿ.ದೇಶಪಾಂಡೆಯವರು ನೀಡಿ ಗೌರವಿಸಿದರು. 

 ಶ್ರೀಮತಿ ಲಕ್ಷ್ಮೀ ಶ್ರೀ ನಾಗಪ್ಪಯ್ಯ ನಾಯಕ್ ಸದ್ಭಾವನಾ ವೇದಿಕೆ ನಾಯ್ಕನಕಟ್ಟೆ. ಬೀದರಿನ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರಿನ ಕವಿ ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನ ಇವುಗಳ ಸಂಯುಕ್ತ ಆಶಯದಲ್ಲಿ ಉಪ್ಪುಂದ ರೈತಸಿರಿ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಕವಿ ಕೆ.ಪುಂಡಲೀಕ ನಾಯಕ ಅವರ ಕವನ ಸಂಕಲನಗಳ ಬಿಡುಗಡೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. 

ಖ್ಯಾತ ನ್ಯಾಯವಾದಿ ಹಾಗೂ ಸಾಹಿತಿಗಳಾದ ಎ.ಎಸ್. ಎನ್ ಹೆಬ್ಬಾರ್,ಹಿರಿಯ ಸಹಕಾರಿ ಧುರೀಣ ಎಸ್ ಪ್ರಕಾಶ್ಚಂದ್ರ ಶೆಟ್ಟಿ,ಖ್ಯಾತ ವಿಮರ್ಶಕರು, ಸಾಹಿತಿಗಳೂ ಆದ ಬೆಳಗೋಡು ರಮೇಶ್ ಭಟ್ಟ್, ಖ್ಯಾತ ಲೇಖಕಿ ಡಾ.ಪಾರ್ವತಿ ಜಿ.ಐತಾಳ್, ಹಿರಿಯ ಸಾಹಿತಿ, ವಿಮರ್ಶಕರಾದ ಪ್ರೋ.ಉಪೇಂದ್ರ ಸೋಮಯಾಜಿ,ಪಂಚಾಯತ್ ರಾಜ್ ತಜ್ಞ, ಪತ್ರಕರ್ತ ಎಸ್.ಜನಾರ್ದನ ಮರವಂತೆ, ಅಂತರಾಷ್ಟ್ರೀಯ ಜಾದೂಗಾರ ,ಲೇಖಕ ಓಂ ಗಣೇಶ್ ಉಪ್ಪುಂದ,ಪತ್ರಕರ್ತ, ಕುಂದಪ್ರಭ ಪತ್ರಿಕೆಯ ಎಸ್ ಶೆಣೈ, ಕಾರ್ಯಕ್ರಮದ ರೂವಾರಿ ಕವಿ ಕೆ.ಪುಂಡಲೀಕ ನಾಯಕ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply