ಉಡುಪಿ : ಗೃಹ ನಿರ್ಮಾಣಕ್ಕಾಗಿ ಧನಸಹಾಯ

ಉಡುಪಿ : ರೋಟರಿ ಮಣಿಪಾಲ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಆಶ್ರಯದಲ್ಲಿ ಮಣಿಪಾಲದ ರೋಟರಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ನಿರ್ಮಾಣಕ್ಕಾಗಿ ವಿಜಯಲಕ್ಷ್ಮಿ ಕುಟುಂಬಕ್ಕೆ 50000 ಮೊತ್ತವನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ವಿಶ್ವನಾಥ ಶೆಣೈ ನೀಡಿದರು .

ರೋಟರಿ ಮಣಿಪಾಲ್ ನ ಅಧ್ಯಕ್ಷ ಡಾ. ವಿರೂಪಾಕ್ಷ ದೇವರಮನೆ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊಫೆಸರ್ ಶಂಕರ್, ನಿಯೋಜಿತ ರೋಟರಿ ಮಣಿಪಾಲ್ ನ ಅಧ್ಯಕ್ಷೆ ರೇಣು ಜಯರಾಮ್, ಕಲಾವಿದ ದಿನೇಶ್ ಹೊಳ್ಳ ಸಂಚಾಲಕ ರವಿರಾಜ್ ಎಚ್.ಪಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply