ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಮಂಡನೆ ಸ್ವಾಗತಾರ್ಹ – ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ

ಉಡುಪಿ: ಸನಾತನ ಹಿಂದೂ ಧರ್ಮದ ಮೇಲೆ ಸಾಂಸ್ಕೃತಿಕವಾಗಿ ಯುದ್ದ ಸಾರಿರುವ ಜಿಹಾದಿ ಮತ್ತು ಮಿಷನರಿಗಳ ವಿರುದ್ದ ಬಿಜೆಪಿ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ, 2021’ನ್ನು ರಾಜ್ಯ ವಿಧಾನ ಸಭೆಯಲ್ಲಿ ಮಂಡಿಸಿರುವ ನಡೆ ಸ್ವಾಗತರ್ಹ ಎಂದು ಬಿಜೆಪಿ ಮಾಜಿ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ತಿಳಿಸಿದ್ದಾರೆ. 

ಈ ಮಸೂದೆಯನ್ನು ಖಾಸಗಿ ವಿಧೇಯಕವಾಗಿ ಮಂಡಿಸಲು ಸಿದ್ದರಾದ ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜ್ ಅವರಿಗೆ ಅಭಿನಂದನೆಗಳು. ಅವರ ವಿಶೇಷ ಮುತುವರ್ಜಿಯಿಂದ ಈ ಮಸೂದೆಯನ್ನು ಸರಕಾರ ಮಂಡಿಸಲು ಸಾಧ್ಯವಾಗಿದೆ 

ಹಿಂದೂ ಯುವತಿಯರನ್ನು ಪ್ರೇಮದ ಹೆಸರಲ್ಲಿ ವಿವಾಹವಾಗಿ ಇಸ್ಲಾಂಗೆ ಮತಾಂತರ ಮಾಡುತ್ತಿದ್ದರು. ನಂತರ ಆ ಯುವತಿ ಎಲ್ಲಿದ್ದಾಳೆ ಎಂಬುದು ಯಾರಿಗೂ ತಿಳಿಯುತ್ತಿರಲಿಲ್ಲ. ಅಲ್ಲದೇ ಮಿಷನರಿಗಳು ಮುಗ್ದ ಹಿಂದೂಗಳನ್ನು ಮತಾಂತರ ನಡೆಸುತ್ತಿದ್ದರು. ಹೊಸ ವಿಧೇಯಕದಿಂದ ಇದಕ್ಕೆಲ್ಲಾ ಅಂತ್ಯ ಸಿಗಲಿದೆ.

ಚುನಾವಣೆಗೂ ಮುನ್ನ ಬಿಜೆಪಿ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಮತಾಂತರ ನಿಷೇಧ, ಗೋಹತ್ಯೆ ನಿಷೇಧ, ಶ್ರೀ ರಾಮ ಮಂದಿರ ನಿರ್ಮಾಣ, 370ನೇ ವಿಧಿ ರದ್ದತಿ ಇದೆಲ್ಲವನ್ನು ಮಾಡಿ ತೋರಿಸಿದೆ. ಇದು ಹೆಮ್ಮೆಯ ವಿಚಾರ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply