ಪಿಪಿಸಿಯಲ್ಲಿ ಆರೋಗ್ಯ ಅರಿವು ಕಾರ್ಯಗಾರ

ಹೆಣ್ಣು ಸಮಾಜದ ಕಣ್ಣು, ಮಹಿಳೆ ತನ್ನ ಆರೋಗ್ಯದ ಬಗ್ಗೆ ಗಮನ ಕೊಡುವುದರ ಮೂಲಕ ಸ್ವಸ್ಥ ಸಮಾಜಕ್ಕೆ ತನ್ನ ಕೊಡುಗೆಯನ್ನು ಕೊಡುವುದು ಸಾಧ್ಯ, ಆರೋಗ್ಯ ರಕ್ಷಣೆ ಪ್ರತಿಯೊಬ್ಬ ಮಹಿಳೆಯ ಜವಾಬ್ದಾರಿ ಎಂದು ಉಡುಪಿ ವಿದ್ಯಾರತ್ನ ಇನ್ಸ್ಟಿಟ್ಯೂಟ್ ಆಫ್  ಎಲೈಡ್ ಹೆಲ್ತ್ ಸೈನ್ಸ್ನ ಪ್ರಾಂಶುಪಾಲೆ ಡಾ. ಇಂದಿರಾ ಶಾನುಭೋಗ್ ಇವರು
ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿದರು.
ಪೂರ್ಣಪ್ರಜ್ಞ (ಸ್ವಾಯತ್ತ) ಕಾಲೇಜು, ಉಡುಪಿ, ಹಾಗೂ ಪೂರ್ಣಪ್ರಜ್ಞ ಹಳೇ ವಿದ್ಯಾರ್ಥಿ ಸಂಘ ಜಂಟಿಯಾಗಿ ಆಯೋಜಿಸಿದ ಆರೋಗ್ಯ ಅರಿವು ಕಾರ್ಯಕ್ರಮ “ಬ್ಲಾಸಂ ವಿತ್ ಬ್ಯಾಲೆನ್ಸ್” ಇದರಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ. ಇಂದಿರಾ
ಪೈ ಶಾನುಭೋಗ್ ರವರು ವಿದ್ಯಾರ್ಥಿನಿಯರು ಗಮನಿಸಬೇಕಾದ ಆರೋಗ್ಯ ಸಮಸ್ಯೆಗಳು, ಸರಿಯಾದ ಜೀವನ ಕ್ರಮ ಹಾಗೂ ಚಟುವಟಿಕೆಗಳು, ಆರೋಗ್ಯಕ್ಕಾಗಿ ಮುಂಜಾಗ್ರತಾ ಕ್ರಮಗಳು, ಜೀವನ ಶೈಲಿ ಮುಂತಾದ ವಿಷಯಗಳ ಕುರಿತಾಗಿ ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿ ಪೂರ್ಣಪ್ರಜ್ಞ ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಪದ್ಮಾ ಕಿಣಿ ಇವರು ವಿದ್ಯಾರ್ಥಿನಿಯರ ಆರೋಗ್ಯ ರಕ್ಷಣೆ ಕುರಿತು
ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪೂರ್ಣಪ್ರಜ್ಞ ಹಳೇ ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಡಾ.ಎಂ.ಆರ್.ಹೆಗ್ಗಡೆ ಇವರು ಆರೋಗ್ಯದ ಕುರಿತಾದ ಮಾರ್ಗದರ್ಶನಗಳನ್ನು
ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ವಸಂತ ರವಿಪ್ರಕಾಶ್, ಕಾರ್ಯಕ್ರಮ ಸಂಯೋಜಕೀ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ಜಯಲಕ್ಷ್ಮೀ, ಶ್ರೀಮತಿ ಸುಮಲತಾ ಕಾಲೇಜಿನ ಉಪನ್ಯಾಸಕ ವ್ರಂದದವರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ವಿದ್ಯಾರ್ಥಿನಿ ಕುಮಾರಿ ಅಂಶು ಸ್ವಾಗತಿಸಿ, ಕುಮಾರಿ ಶ್ರೇಯಾನಿ ವಂದಿಸಿದರು, ಕುಮಾರಿ ಧನ್ಯಾ ರಾವ್ ಕಾರ್ಯಕ್ರಮ
ನಿರ್ವಹಿಸಿದರು.
 
 
 
 
 
 
 
 
 
 
 

Leave a Reply