17ರ ಹರೆಯದ ಶಾಲಾ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ!

ಬೈಕ್ ನಲ್ಲಿ ಬಂದ ಇಬ್ಬರು ಯುವಕರು 17ರ ಹರೆಯದ ಶಾಲಾ ವಿದ್ಯಾರ್ಥಿನಿಗೆ ಆ್ಯಸಿಡ್ ಎರಚಿರುವ ಘಟನೆ ದೆಹಲಿಯ ದ್ವಾರಾಕಾದಲ್ಲಿ ವರದಿಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಆ್ಯಸಿಡ್ ದಾಳಿಗೊಳಗಾಗಿರುವ 12ನೇ ತರಗತಿ ವಿದ್ಯಾರ್ಥಿನಿ ಸಫ್ದಾರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಬಾಲಕಿಯ ಕುಟುಂಬ ನೀಡಿದ ದೂರಿನನ್ವಯ ಪೊಲೀಸರು ಒಬ್ಬನನ್ನು ಬಂಧಿಸಿದ್ದು, ಇನ್ನೊಬ್ಬನಿಗಾಗಿ ಹುಡುಕಾಟ ನಡೆದಿದೆ. ಬೆಳಗ್ಗೆ 9 ಗಂಟೆಗೆ ಮೋಹನ್ ಗಾರ್ಡನ್ ಪ್ರದೇಶದಲ್ಲಿ ನಡೆದಿರುವ ಆ್ಯಸಿಡ್ ದಾಳಿಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ಬೆಳಗ್ಗೆ ಸರಿ ಸುಮಾರು 7.30ಕ್ಕೆ ಬೈಕ್​​ನಲ್ಲಿ ಬಂದ ವ್ಯಕ್ತಿಗಳು 17ರ ಹರೆಯದ ಬಾಲಕಿ ಮೇಲೆ ಆ್ಯಸಿಡ್ ನಂತಿರುವ ವಸ್ತು ಎರಚಿದ್ದಾರೆ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದರು ಎಂದು ಉಪ ಪೊಲೀಸ್ ಆಯುಕ್ತ (ದ್ವಾರಕಾ) ಎಂ. ಹರ್ಷವರ್ಧನ್ ಹೇಳಿದ್ದಾರೆ. ಘಟನೆ ನಡೆದಾಗ ಬಾಲಕಿ ಜತೆ ಆಕೆಯ ತಂಗಿ ಕೂಡಾ ಇದ್ದಳು. ತಮಗೆ ಪರಿಚಿತರಾಗಿರುವ ವ್ಯಕ್ತಿಗಳೇ ಈ ಕೃತ್ಯವೆಸಗಿದ್ದಾರೆ ಎಂದು ಆಕೆ ಸಂದೇಹ ವ್ಯಕ್ತ ಪಡಿಸಿದ್ದಾಳೆ. ಇದೀಗ ಮೂವರು ಆರೋಪಿಗಳು ಬಂಧಿಸಿದ್ದು, ಈ ಪ್ರಕರಣ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಹೇಳಿದ್ದಾರೆ. ಆರೋಪಿಗಳು ಅಪ್ರಾಪ್ತರೇ ಅಥವಾ ಅಲ್ಲವೇ ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ಬಲ್ಲಮೂಲಗಳ ಪ್ರಕಾರ ಆರೋಪಿಗಳು ಸಂತ್ರಸ್ತೆಯ ನೆರೆಹೊರೆಯವರೇ ಆಗಿದ್ದಾರೆ.

ಸುಪ್ರೀಂಕೋರ್ಟ್ ಆ್ಯಸಿಡ್ ಮಾರಾಟ ನಿಷೇಧ ಮಾಡಿದ್ದರೂ ಆನ್​​ಲೈನ್ ಮೂಲಕ ಆ್ಯಸಿಡ್ ಸುಲಭವಾಗಿ ಖರೀದಿಸಲು ಸಾಧ್ಯ ಎಂಬ ವಿಷಯ ಈ ಪ್ರಕರಣ ಮೂಲಕ ಬೆಳಕಿಗೆ ಬಂದಿದೆ. ಆ್ಯಸಿಡ್ ಸುಲಭವಾಗಿ ದಕ್ಕುವಂತೆ ಮಾಡುವ ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ಶಾಪಿಂಗ್ ಸೈಟ್ ಗೆ ದೆಹಲಿ ಮಹಿಳಾ ಆಯೋಗ ನೋಟಿಸ್ ಕಳುಹಿಸಿದೆ. ನೈಋತ್ಯ ದೆಹಲಿಯ ದ್ವಾರಾಕಾದಲ್ಲಿ ಬುಧವಾರ ವಿದ್ಯಾರ್ಥಿನಿ ಶಾಲೆಗೆ ಹೋಗಲು ರಸ್ತೆ ಬದಿಯಲ್ಲಿ ನಿಂತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ಯುವಕರು ಆಕೆಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. ಯುವಕರು ಆ್ಯಸಿಡ್ ಎರಚಿ ಪರಾರಿಯಾಗುತ್ತಿರುವುದು, ವಿದ್ಯಾರ್ಥಿನಿ ನೋವಿನಿಂದ ಕಿರುಚಿ ಓಡುತ್ತಿರುವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. 20ರ ಹರೆಯದ ಸಚಿನ್ ಅರೋರಾ ಎಂಬ ಯುವಕ ಸೆಪ್ಟೆಂಪರ್ ತಿಂಗಳಲ್ಲೇ ಈ ವಿದ್ಯಾರ್ಥಿನಿ ಹಿಂದೆ ಬಿದ್ದಿದ್ದ. ಆ್ಯಸಿಡ್ ದಾಳಿಗೆ ಸಂಚು ರೂಪಿಸಿತದ್ದು ಕೂಡಾ ಇವನೇ. ಇವನಿಗೆ ಹರ್ಷಿತ್ ಅಗರವಾಲ್ (19) ಮತ್ತು ವಿರೇಂದರ್ ಸಿಂಗ್ (22) ಸಹಾಯ ಮಾಡಿದ್ದರು. ಸಚಿನ್ ಮತ್ತು ಹರ್ಷಿತ್ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ಎರಚಿದ್ದರು. ವಿರೇಂದರ್ ಸಚಿನ್ ನ ಸ್ಕೂಟರ್ ಮತ್ತು ಮೊಬೈಲ್ ಫೋನ್ ನ್ನು ಬೇರೆಡೆಗೆ ಒಯ್ದಿದ್ದ. ಈ ಮೂಲಕ ಈತ ಪೊಲೀಸರ ತನಿಖೆಯ ದಾರಿ ತಪ್ಪಿಸಲು ಪ್ರಯತ್ನಿಸಿದ್ದ. ದಾಳಿ ನಡೆದ 12 ಗಂಟೆಗಳಲ್ಲಿ ಮೂವರನ್ನೂ ಬಂಧಿಸಲಾಗಿದೆ. ಈ ಆರೋಪಿಗಳಿ ಆನ್​​ಲೈನ್​​ನಲ್ಲಿ ಆ್ಯಸಿಡ್ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಫ್ಲಿಪ್ ಕಾರ್ಟ್ ಮೂಲಕ ಆ್ಯಸಿಡ್ ಖರೀದಿಸಿದ್ದ ಸಚಿನ್ ಆರೋರಾ ತನ್ನ ಇ ವಾಲೆಟ್ ನಿಂದಲೇ ಹಣ ಪಾವತಿ ಮಾಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರೀತ್ ಹೂಡಾ ಹೇಳಿದ್ದಾರೆ.

 
 
 
 
 
 
 
 
 
 
 

Leave a Reply