ಉಡುಪಿಯ ರೋಬೋಸಾಫ್ಟ್ ಸಂಸ್ಥೆಯಿಂದ 7 ಆಕ್ಸಿಜನ್ ಕಾನ್ಸಂಟ್ರೇಟರ್,1000 ಫಲ್ಸ್ ಆಕ್ಸಿ ಮೀಟರ್ ಕೊಡುಗೆ

ಉಡುಪಿ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರುತ್ತಿರುವ ಹಿನ್ನೆಲೆ ಆಕ್ಸಿಜನ್ ಕೊರತೆಯಾಗದಂತೆ ಹಾಗೂ ಇನ್ನಿತರ ಸಹಕಾರಕ್ಕಾಗಿ ಶಾಸಕ ಕೆ. ರಘುಪತಿ ಭಟ್ ಅವರು ದಾನಿಗಳಲ್ಲಿ ಹಾಗೂ ಕೈಗಾರಿಕೋದ್ಯಮಿಗಳಲ್ಲಿ ಮನವಿ ಮಾಡಿದ್ದರು.ಇದಕ್ಕೆ ಉಡುಪಿಯ ರೋಬೋಸಾಫ್ಟ್ ಸಂಸ್ಥೆ ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಫಲ್ಸ್ ಆಕ್ಸಿ ಮೀಟರ್ ಕೊಡುಗೆಯಾಗಿ ನೀಡಿದ್ದಾರೆ.

ಇಂದು ಸಂಸ್ಥೆಯ ಪ್ರಮುಖರು ಶಾಸಕರ ಸಮ್ಮುಖದಲ್ಲಿ ರೂ. 20.00 ಲಕ್ಷ ವೆಚ್ಚದ 10 ಲೀಟರ್ ಸಾಮರ್ಥ್ಯದ 7 ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ 1000 ಫಲ್ಸ್ ಆಕ್ಸಿ ಮೀಟರ್ ರನ್ನು ಜಿಲ್ಲಾಧಿಕಾರಿಯವರ ಮುಖಾಂತರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.

ರೂ. 20.00 ಲಕ್ಷ ವೆಚ್ಚದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಫಲ್ಸ್ ಆಕ್ಸಿ ಮೀಟರ್ ಕೊಡುಗೆಯಾಗಿ ನೀಡಿದ ರೋಬೋಸಾಫ್ಟ್ ಸಂಸ್ಥೆಗೆ ಹಾಗೂ ಅವರ ಸಾಮಾಜಿಕ ಕಳಕಳಿಗೆ ಶಾಸಕ ರಘುಪತಿ ಭಟ್ ಅಭಿನಂದನೆ ಸಲ್ಲಿಸಿದ್ದಾರೆ.

ರೋಬೋಸಾಫ್ಟ್ ಸಂಸ್ಥೆಯ ಆಡಳಿತ ನಿರ್ದೇಶಕ ರೋಹಿತ್ ಭಟ್, ಆರ್ಥಿಕ ನಿರ್ದೇಶಕ ಸುಧೀರ್ ಭಟ್, ಜಿಲ್ಲಾ ಆರೋಗ್ಯಾಧಿಕಾರಿ ಸುಧೀರ್ ಚಂದ್ರ ಸೂಡ, ಜಿಲ್ಲಾ ಶಸ್ತ್ರಚಿಕಿತ್ಸಕ ಮಧುಸೂದನ್ ನಾಯಕ್, ಕೋವಿಡ್ ನೋಡಲ್ ಅಧಿಕಾರಿಗ ಪ್ರಶಾಂತ್ ಭಟ್ ಹಾಗೂ ಇತರ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply