ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಕ್ರಮ

ಕುಂದಾಪುರ: ಉಡುಪಿ ಹಾಗೂ ದ.ಕ. ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಕಡಲ್ಕೊರೆತ ಹೆಚ್ಚಾಗಿದೆ.  ಕಡಲ ಕೊರೆತದಿಂದಾಗಿ ಮನೆ ಹಾಗೂ ರಸ್ತೆಗಳು ಹಾಳಾಗದಂತೆ ಕ್ರೆಮ ಕೈಗೊಳ್ಳುವಂತೆ ಈಗಾಗಲೇ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಈ  ನಿಟ್ಟಿನಲ್ಲಿ  ಶಾಶ್ವತ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇಲ್ಲಿನ ಕೋಡಿ ಪ್ರದೇಶಕ್ಕೆ  ಇಂದು ಸಂಜೆ  ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಸ್ಥಳೀಯರು ತಮಗಾಗುತ್ತಿರುವ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದರು. ಜೊತೆಗೆ ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉದಯ್ ಕುಮಾರ್, ಸಹಾಯಕ ಇಂಜಿನಿಯರ್ ಡಯಾಸ್ ಪ್ರಸ್ತಾವಿತ ಕಾಮಗಾರಿ ಬಗ್ಗೆ ವಿವರಿಸಿದರು. ಕುಂದಾಪುರ ತಹಶೀಲ್ದಾರ್ ಕೆ.ಬಿ. ಆನಂದಪ್ಪ ಇದ್ದರು

ಕೋಡಿಯಲ್ಲಿ 400 ಮೀ. ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಈ ಬಗ್ಗೆ ಇಲಾಖೆ ಪ್ರಸ್ತಾವನೆ ಕಳಿಸಿದೆ. ಶಾಶ್ವತ ತಡೆಗೋಡೆ ಬಳಿಕ ಈಗಾಗಲೇ  ಅಲ್ಲಿ ಹಾಕಿರುವ ಕಲ್ಲುಗಳ ಮರುಬಳಕೆ ಮಾಡಲಾಗುತ್ತದೆ ಎಂದದರು.

ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ಕುಂದಾಪುರ ಪುರಸಭಾ ಸದಸ್ಯೆ ಕಮಲಾ‌ ಮಂಜುನಾಥ ಪೂಜಾರಿ, ತಾ.ಪಂ‌ ಸದಸ್ಯ ಕರಣ ಪೂಜಾರಿ ತಲ್ಲೂರು, ಸ್ಥಳೀಯ‌ರಾದ ನಾಗರಾಜ ಕಾಂಚನ್, ಮಹೇಶ್ ಪೂಜಾರಿ ಹಳೆಅಳಿವೆ ಮೊದಲಾದವರಿದ್ದರು.

 
 
 
 
 
 
 
 
 
 
 

Leave a Reply