ಜನವಸತಿ ಪ್ರದೇಶದಲ್ಲಿ ನಿರ್ಮಾಣವಾಗಿದೆ ಮಿನಿ ಡಂಪಿಂಗ್ ಯಾರ್ಡ್ – ರಾಘವೇಂದ್ರ ಪ್ರಭು,ಕರ್ವಾಲು

ಅಲೆವೂರು ಗ್ರಾ.ಪಂ ವ್ಯಾಪ್ತಿಯ ಪ್ರಗತಿ ನಗರ ಬಳಿ ಇರುವ ನೇತಾಜಿ ನಗರ ಜನವಸತಿ ಪ್ರದೇಶದಲ್ಲಿ ಕಸದ ರಾಶಿ ಸಂಗ್ರಹವಾಗಿ ಮಿನಿ ಡಂಪಿಂಗ್ ಯಾರ್ಡ್ ನಿರ್ಮಾಣವಾಗಿದೆ.ಈ ಪ್ರದೇಶದಲ್ಲಿ ರಾತ್ರಿಯ ಸಮಯದಲ್ಲಿ ವಾಹನಗಳಲ್ಲಿ ಬಂದು ಕಸ ಸುರಿಯಲಾಗುತ್ತಿದ್ದು ಅಲ್ಲದೆ ಜನರು ತಮ್ಮ ಮನೆಯ ಕಸದ ವಿಲೇವಾರಿಗೆ ಈ ಸ್ಥಳವನ್ನು ಆಯ್ಕೆ ಮಾಡಿರುವುದು ದುರಂತದ ವಿಷಯ ಈ ಬಗ್ಗೆ ಸ್ಪಳೀಯ ಜನರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕಸದ ರಾಶಿಗೆ ಮುಕ್ತಿ ದೊರಕಿಲ್ಲ.

ಈ ಕಸದಿಂದ ಪರಿಸರ ಮಾಲಿನ್ಯ ಉಂಟಾಗಿದ್ದು, ದುರ್ನಾತದಿಂದ ಜೀವನ ನಿವ೯ಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ಜನರ ದೂರು.ಕೋವಿಡ್ ನಂತಹ ಈ ಪರಿಸ್ಥಿತಿಯಲ್ಲಿ ಈ ಕಸದಿಂದ ಇನಿತರ ಸಾಂಕ್ರಾಮಿಕ ರೋಗ ಬರುವ ಸಾಧ್ಯತೆಯಿದೆ. ಹೀಗಾಗಿ ಆದಷ್ಟು ಬೇಗ ಈ ಕಸದ ರಾಶಿಗೆ ಮುಕ್ತಿ ದೊರೆಯಲಿ ಅದೇ ರೀತಿ ಕಸ ಹಾಕುವ ಹಾಳು ಮನಸ್ಸಿನ ಜನರಿಗೆ ಶಿಕ್ಷೆಯಾಗಲಿ.

 

 
 
 
 
 
 
 
 
 
 
 

Leave a Reply