Janardhan Kodavoor/ Team KaravaliXpress
31.6 C
Udupi
Tuesday, May 24, 2022
Sathyanatha Stores Brahmavara

ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ (ರಿ) ಹಿರಿಯಡ್ಕದ ವಾರ್ಷಿಕೋತ್ಸವ

ಹಿರಿಯಡ್ಕ: ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ (ರಿ) ಹಿರಿಯಡ್ಕ ದ 29 ನೆಯ ವಾರ್ಷಿಕೋತ್ಸವ ಕೋಟ್ನಕಟ್ಟೆ ರಂಗಮಂದಿರದಲ್ಲಿ ಸುಜಯ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ನೃತ್ಯ ಪ್ರದರ್ಶನಗಳು ನಡೆದವು.ರಂಗ ತರಂಗ ಕಲಾವಿದರು ಕಾಪು ಇವರ “ಮೋಕೆ ” ತುಳು ಹಾಸ್ಯಮಯ ಸಾಂಸಾರಿಕ ನಾಟಕ ಪ್ರದರ್ಶನಗೊಂಡಿತು.

ಬಸ್ತಿ ಯಶವಂತ ಪೈ ಸ್ಮರಣಾರ್ಥ ಮಹಲಸಾ ಎಕ್ಸ್ ಪೋರ್ಟ್ಸ್ ನ ಮಾಲಕ ಬಿ.ರೋಹಿದಾಸ್.ಪೈ ಕೊಡಮಾಡಿದ ಹಿರಿಯಡಕದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಐಶ್ವರ್ಯಾ ಸೇರಿಗಾರ್ (ಕನ್ನಡ ಮಾಧ್ಯಮ) ಅಗಸ್ತ್ಯ ಸಮ್ಯಕ್ ಜ್ಞಾನ್ (ಇಂಗ್ಲಿಷ್ ಮಾಧ್ಯಮ) ಇವರಿಗೆ ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ವತಿಯಿಂದ ತಲಾ 10 ಸಾವಿರ ರೂಪಾಯಿಗಳ ವಿದ್ಯಾರ್ಥಿವೇತನ ವಿತರಿಸಿ ಸನ್ಮಾನಿಸಲಾಯಿತು.

ಮಹಲಸಾ ಎಕ್ಸ್ ಪೋರ್ಟ್ಸ್ ನ ಶ್ರೀಮತಿ ವನಿತಾ ಪೈ,ಶ್ರೀಮತಿ ಪ್ರಿಯಾ ಪೈ ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷ ಸುಜಯ್ ಶೆಟ್ಟಿ ಕಾರ್ಯದರ್ಶಿ ಪ್ರವೀಣ್ ಎಂ ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ,ದಿವಾಕರ್ ಭಂಡಾರಿ, ದೇವದಾಸ್ ಮರಾಠೆ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಾಲಕೃಷ್ಣ ಬಿ.ಕೆ ನಿರೂಪಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!