‘ಪುಸ್ತಕದ ಮನೆ’ ಒಕ್ಕಲು

 ಕಿನ್ನಿಗೋಳಿ : “ಪುಸ್ತಕದ ಮನೆ” ಇಲ್ಲಿ ಕಾದಂಬರಿ,ಕಥಾಸಂಕಲನ , ಧಾರ್ಮಿಕ ,ಯಕ್ಷಗಾನ, ಪುರಾಣ, ತುಳುಸಾಹಿತ್ಯ ಹೀಗೆ ಪುಸ್ತಕಗಳ ಸಂಗ್ರಹ ಇಲ್ಲಿದೆಪು. ವಿಶೇಷ ಎಂದರೆ ಇಲ್ಲಿ ಪುಸ್ತಕ ಓದಬಹುದು , ಓದಿ ವಾಪಾಸು ತಂದು ಕೊಡಬಹುದು , ಖರೀದಸಲೂ ಬಹುದು , ಓದುಗರ ಬಳಗ ಸೇರಬಹುದು. ಪುಸ್ತಕ – ಸಾಹಿತ್ಯ ಚರ್ಚೆ ನಡೆಸಬಹುದು, ಸಾಹಿತಿಗಳನ್ನು ಭೇಟಿಮಾಡಬಹುದು . ಹೀಗೆ ಸಾಹಿತ್ಯಾಸಕ್ತರಿಗೆ,ಓದುವ ಮನಸ್ಸುಳ್ಳ ಜ್ಞಾನದಾಹಿಗಳಿಗೆ ಏನಾದರೂ ಮಾಡಬೇಕೆಂಬ ಒತ್ತಾಸೆಯಿಂದ ಕಟ್ಟಿದ ಪುಸ್ತಕದ ಮನೆ ಜ.28 ರಂದು ಕಿನ್ನಿಗೋಳಿಯಲ್ಲಿ  ಪ್ರಾರಂಭವಾಯಿತು .

 ಕಟೀಲಿನ ಪಾಂಡುರಂಗ ಭಟ್ಟ ಮತ್ತು , ಎಲ್.ಕುಂಡಂತಾಯ ಅವರು ‘ಪುಸ್ತಕದ ಮನೆ’ಯನ್ನು ಉದ್ಘಾಟಿಸಿದರು .ಬಾಲಕೃಷ್ಣ ಉಡುಪ ,ದೇವದಾಸ ಮಲ್ಯ, ಪುರುಷೋತ್ತಮ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

  ಕಿನ್ನಿಗೋಳಿಯ ಅನಂತ ಪ್ರಕಾಶನದ ಬೆಳ್ಳಿಹಬ್ಬದ ಸಂಭ್ರಮಾಚರಣೆ ಅಂಗವಾಗಿ ‘ಪುಸ್ತಕದ ಮನೆ’ ತೆರೆಯಲಾಗಿದೆ ಎಂದು ಸಚ್ಚಿದಾನಂದ ಉಡುಪ ಹೇಳಿದರು.ಗಾಯತ್ರೀ ಉಡುಪ ಸ್ವಾಗತಿಸಿ ,ವಂದಿಸಿದರು .ಮಿಥುನ್ ಉಡುಪ , ರಚನಾ ಉಡುಪ ಉಪಸ್ಥಿತರಿದ್ದರು .

 

 
 
 
 
 
 
 
 
 
 
 

Leave a Reply