Janardhan Kodavoor/ Team KaravaliXpress
26.6 C
Udupi
Monday, January 30, 2023
Sathyanatha Stores Brahmavara

ಪರಿಸರ ಸಂರಕ್ಷಿಸಿದರೆ ಮನುಕುಲ ಉಳಿಯಲು ಸಾಧ್ಯ – ರಷಿರಾಜ್ ಸಾಸ್ತಾನ

ಕೋಟ: ಪರಿಸರ ಉಳಿದರೆ ಮಾತ್ರ ಮನುಕುಲ ಉಳಿಯ ಸಾಧ್ಯ ಎಂದು ಪರಿಸರ ಪ್ರೇಮಿ ರಷಿರಾಜ್ ಸಾಸ್ತಾನ ಹೇಳಿದರು. ಹಂಗಾರಕಟ್ಟೆ ಜಿ.ಪಂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತ್ರತ್ವದಲ್ಲಿ  ಕೋಟ ಹೋಬಳಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಪರಿಸರದಲ್ಲಿ ಕಾರ್ಯಾಗಾರ ಮಾಲಿಕೆ 6ರನ್ನು ಉದ್ಘಾಟಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಿಸಿದರೆ ಮುಂದಿನ ಪೀಳಿಗೆ ಈ ಭೂಮಿಯಲ್ಲಿ ಉಳಿಯಲು ಸಾಧ್ಯ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಪರಿಸರದಲ್ಲಿ ಗಿಡಮರಗಳನ್ನು  ನೆಟ್ಟು ಪೋಷಿಸಬೇಕು ಅಲ್ಲದೆ ಸ್ವಚ್ಛ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕರೆ ಇತ್ತರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ರೇಡಿಯೋ ಮಣಿಪಾಲ ಬಾನುಲಿ ಕೇಂದ್ರದ ಸಂಯೋಜಕಿ ಡಾ.ರಶ್ಮಿ ಅಮ್ಮೆಂಬಳ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ನೀಡಿದರೆ ಅದು ಪರಿಣಾಮಕಾರಿಯಾಗಿ ಅನುಷ್ಠಾನ ಸಾಧ್ಯ, ಈ ದಿಸೆಯಲ್ಲಿ ಕೋಟ ಪಂಚವರ್ಣ ಸಂಸ್ಥೆಯ ಕಾರ್ಯಕ್ರಮ ಶ್ಲಾಘನೀಯ. ಪರಿಸರವನ್ನು ಉಳಿಸಬೇಕೆಂಬ ಆ ಸಂಸ್ಥೆಯ ನಿತ್ಯನಿರಂತ ಅಭಿಯಾನ ಎಲ್ಲಾ ಸಂಘಸ೦ಸ್ಥೆಗಳಿಗೂ ಮಾದರಿ, ಇಂದಿನ ವಿದ್ಯಾರ್ಥಿಗಳು  ಮುಂದಿನ ಸಮಾಜದ ಬಗ್ಗೆ ಚಿಂತಿಸಬೇಕಾದ ಅಗತ್ಯತೆ, ಪ್ಲಾಸ್ಟಿಕ್ ಮುಕ್ತ ಹಾಗೂ ಹಸಿರು ವಾತಾವರಣ,ಮಣ್ಣು ಹಾಗೂ ನೀರಿನ ಮಹತ್ವದ  ಕುರಿತು ವಿವರವಾದ ಮಾಹಿತಿ ನೀಡಿದರು.
ಜಿ.ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆ ಇದರ ಮುಖ್ಯ ಶಿಕ್ಷಕಿ ಸೇಸು ಟೀಚರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಪಾಂಡೇಶ್ವರ ಗ್ರಾಮಪಂಚಾಯತ್ ಮಾಜಿ ಸದಸ್ಯೆ ಲೀಲಾತಿ ಗಂಗಾಧರ,ಗೆಳೆಯರ ಬಳಗ ಕಾರ್ಕಡ ಇದರ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ, ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ  ಕಲಾವತಿ ಅಶೋಕ್ ,ಶಾಲಾ ಸಹಶಿಕ್ಷಕಿ ವೀಣಾ ಟೀಚರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ.ರಶ್ಮಿ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ  ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮ ಸಂಯೋಜಕ ರವೀಂದ್ರ ಕೋಟ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು.ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು.ಪಂಚವರ್ಣ ಯುವಕಮಂಡಲದ ಕಾರ್ಯದರ್ಶಿ ಸುಧೀಂದ್ರ ಜೋಗಿ ವಂದಿಸಿದರು.ವಸತಿ ಪೂಜಾರಿ,ಸುಜಾತ ತಿಂಗಳಾಯ ಸಹಕರಿಸಿದರು.
ಹಂದಟ್ಟು ಮಹಿಳಾ ಬಳಗ,ಮಣೂರು ಫ್ರೆಂಡ್ಸ್,ವಿಪ್ರ ಮಹಿಲಾ ಬಳಗ ಸಾಲಿಗ್ರಾಮ,ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು ಮತ್ತಿತರ ಸಂಘಸoಸ್ಥೆಗಳು ಸಹಯೋಗ ನೀಡಿತು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!