ಹಾಡ ಬಿತ್ತೇವ ಮನಕೆಲ್ಲ

ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್… ಹಾಗೂ ಯುವಕ ಮಂಡಲ (ರಿ) ಗೋಪಾಡಿಯುವತಿ ಮಂಡಲ ಗೋಪಾಡಿ…ಇವರ ಸಂಯುಕ್ತ ಆಶ್ರಯದಲ್ಲಿ  ಎಂಬ ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ಏರ್ಪಡಿಸಿದ  ಸೋಬಾನೆ ಹಾಡು/ ಬತ್ತ ಕುಟ್ಟುವ  ಹಾಡಿನ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ಬಾಲ ಗೋಪಾಲ ಶಿಶು ಮಂದಿರದಲ್ಲಿ ಭಾನುವಾರ ಜರುಗಿತು 
ಖ್ಯಾತ ಗಾಯಕರು, ಶ್ರೀ ಮಾತಾ ಆಸ್ಪತ್ರೆ ಕುಂದಾಪರ ಇದರ  ಆಡಳಿತ ಅಧಿಕಾರಿ ಡಾ.ಸತೀಶ್ ಪೂಜಾರಿಯವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.  ಖ್ಯಾತ ಯಕ್ಷಗಾನ ಕಲಾವಿದ ಮಹಬಲೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಗಣೇಶ್ ಗಂಗೊಳ್ಳಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ನಾಡಿನ ಜಾನಪದ ಸಂಸ್ಕ್ರತಿ ವಿಶ್ವಕ್ಕೆ ಮಾದರಿ, ಜಾನಪದ ಸಂಸ್ಕ್ರತಿ  ಮುಂದಿನ ಪೀಳಿಗೆಗೆ  ಕಲಿಸುವ ಉಳಿಸುವ ಕಾರ್ಯ ಆಗಬೇಕು, ಹಾಗಾದಾಗ ಮಾತ್ರ ನಮ್ಮ ಜಾನಪದ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು. 
ಯುವಕ ಮಂಡಲ ಗೊಪಾಡಿ ಅಧ್ಯಕ್ಷ ಶ್ರೀ ಮಾಧವ ಆಚಾರ್ಯ, ಯುವತಿ ಮಂಡಲ ಗೊಪಾಡಿ ಅಧ್ಯಕ್ಷೆ ಪೂರ್ಣಿಮ, ಗೌರವ ಅಧ್ಯಕ್ಷೆ ಸುಜಾತ ಅವರು ಬಹುಮಾನ ಪಟ್ಟಿ ವಾಚಿಸಿದರು.. ಯುವಕ ಮಂಡಲ ಕಾರ್ಯದರ್ಶಿ ರಾಘವೇಂದ್ರ  ಗೋಪಾಡಿ  ನಿರೂಪಿಸಿದರು. ಯುವತಿ ಮಂಡಲದ ಕಾರ್ಯದರ್ಶಿ ಶೋಭಾ ಧನ್ಯವಾದವಿತ್ತರು​

Leave a Reply