ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ

ಉಡುಪಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಚೇತನಾ ಪ್ರೌಢಶಾಲೆ,
ಹಂಗಾರಕಟ್ಟೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ. ಅವರ ಮಾರ್ಗದರ್ಶನದೊಂದಿಗೆ ಡಿಸೆಂಬರ್ ೨೨ ರಂದು ಉದ್ಘಾಟನೆಗೊoಡಿತು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಇದರ ಸಹಯೋಗದೊಂದಿಗೆ ಜರುಗುವ ಏಳು ದಿನಗಳ ಶಿಬಿರವನ್ನು ಐರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಗೀತಾ ಶೆಡ್ತಿ ಉದ್ಘಾಟಿಸಿ ಆಯುರ್ವೇದ
ವೈದ್ಯ ಪದ್ಧತಿಯು ಗ್ರಾಮಗಳ ಪ್ರತಿ ಮನೆಯನ್ನೂ ತಲುಪಲು ಇಂತಹ ಶಿಬಿರಗಳು ಸಹಕಾರಿ ಎಂದು ನುಡಿದರು. ಚೇತನಾ ಪ್ರೌಢ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಭರತ್‌ಕುಮಾರ್ ಶೆಟ್ಟಿ ಶಿಬಿರಾರ್ಥಿಗಳ ಶಿಸ್ತು ಬದ್ಧತೆಗಳನ್ನು ಪ್ರೌಢ ಶಾಲಾ ವಿದ್ಯಾರ್ಥಿಗಳು ಕಲಿಯುವಂತಾಗಲಿ ಎಂದು ಆಶಿಸಿದರು. ಚೇತನಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕಲ್ಪನಾ ಶೆಟ್ಟಿ ಸೇವೆಯ ಸಾರ್ಥಕತೆಯನ್ನು ಬಾಬಾ ಆಮ್ಟೆಯವರ ಜೀವನ ಚರಿತ್ರೆಯ ಮೂಲಕ ವಿವರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ
ಡಾ. ವೀರಕುಮಾರ ಕೆ. ವಹಿಸಿದ್ದರು. ರಾಷ್ಟ್ರೀಯ  ಸೇವಾ ಯೋಜನಾಧಿಕಾರಿ ಡಾ. ವಿದ್ಯಾಲಕ್ಷ್ಮೀ ಕೆ. ಪ್ರಾಸ್ತಾವಿಕ ಭಾಷಣ ನೆರವೇರಿಸಿದರು.

ಶಿಬಿರದಲ್ಲಿ ಸಮುದಾಯ ಸೇವಾ ಘಟಕದ ಮುಖ್ಯಸ್ಥರಾದ ಡಾ. ಎಸ್.ಆರ್. ಮೊಹರೆರ್, ಬಿ.ಡಿ ಶೆಟ್ಟಿ ಪದವಿ ಕಾಲೇಜು ಪ್ರಾಂಶುಪಾಲೆ ಶ್ರೀಮತಿ ಸ್ಮಿತಾ ಮೋಳ್, ಎನ್ನೆಸ್ಸೆಸ್
ಸಹಯೋಜನಾಧಿಕಾರಿಗಳಾದ ಡಾ. ಶ್ರೀನಿಧಿ ಧನ್ಯ, ಡಾ. ಮಹಾಲಕ್ಷ್ಮೀ
ಎಮ್.ಎಸ್., ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply