ದಿವ್ಯಾಂಗ ರಕ್ಷಣಾ ಸಮಿತಿಯ ವತಿಯಿಂದ ಅಂಗವಿಕಲರಿಗೆ ಅಕ್ಕಿ ವಿತರಣೆ

ಕೊಡವೂರು : ಈ ವಾರ್ಡಿನ ದಿವ್ಯಾಂಗ ರಕ್ಷಣಾ ಸಮಿತಿಯ ವತಿಯಿಂದ ಪ್ರತೀ ತಿಂಗಳು ನಡೆಯುವ ದುಡಿಯಲು ಸಾಧ್ಯವಿಲ್ಲದ ಅಂಗವಿಕಲರಿಗೆ ಅಕ್ಕಿ ವಿತರಣೆ ಮತ್ತು ಆಹಾರ ಕಿಟ್,ಕನ್ನಡಕ ವಿತರಣೆ,ಮನೆ ಕಟ್ಟಲು ಮತ್ತು ಅಕ್ಕಿ ವಿತರಣೆ ವಿತರಣೆ ಕಾರ್ಯಕ್ರಮ ಲಯನ್ಸ್ ಕ್ಲಬ್ ಇಂದ್ರಾಳಿ ಉಡುಪಿ ಇವರ ವತಿಯಿಂದ ವಿಪ್ರ ಶ್ರೀ ಸಭಾ ಭವನದಲ್ಲಿ ನಡೆಯಿತು.

ವಿಜಯ್ ಕೊಡವೂರು ಮಾತನಾಡಿ, ಕೊಡವೂರು ವಾರ್ಡ್ ನಲ್ಲಿ ದಿವ್ಯಾಂಗರು 19,ಕ್ಯಾನ್ಸರ್ 21ಜನರು ಇದ್ದು ಜನಗಣತಿಯ ಮೂಲಕ ಕಂಡುಹಿಡಿಯಲಾಯಿತು.ಈ ಸಮಸ್ಯೆಗೆ ಉತ್ತರ ನೀಡಬೇಕು ಎಂಬ ದೃಷ್ಟಿಯಿಂದ ದಿವ್ಯಾಂಗ ರಕ್ಷಣಾ ಸಮಿತಿ ಮಾಡಿಕೊಂಡು ಅವರಿಗೆ ಸರಕಾರದ ವತಿಯಿಂದ ಸಿಗುವ ಎಲ್ಲಾ ಸವಲತ್ತು ತಿಳಿಸುವುದು,ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿ ಮಾಹಿತಿ ನೀಡುವ ಕಾರ್ಯ ನಡೆಯುತ್ತಿದೆ.ಕಳೆದ 1 ವರ್ಷದಿಂದ ಮನೆ ಕಟ್ಟಲು ಸಿಮೆಂಟ್ ವಿತರಣೆ,ಮನೆ ಕಟ್ಟಲು ಸಹಾಯ ಧನ, ಔಷಧಿಗೆ ಸಹಾಯಧನ, ಹೊಲಿಗೆ ಯಂತ್ರ ಸಹಾಯವನ್ನು ಮಾಡುತ್ತಾ ಬಂದಿರುತ್ತೇವೆ ಎಂದರು.

ಲಯನ್ಸ್ ಕ್ಲಬ್ ಹಿರಿಯರಾದ ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ ಕೊಡವೂರು ಗ್ರಾಮ ಆದರ್ಶ ಮತ್ತು ಮಾದರಿ ಗ್ರಾಮ ಆಗುತ್ತಾ ಇದೆ ಎಲ್ಲರೂ ಈ ರೀತಿಯ ಕಾರ್ಯ ಮಾಡಬೇಕು. ಇಂತಹ ಕಾರ್ಯ ಪ್ರತೀ ಗ್ರಾಮದಲ್ಲಿ ಜನಪ್ರತಿನಿಧಿಗಳು ಯೋಚನೆ ಮಾಡಿಯರೆ ನಮ್ಮ ದೇಶ ಉನ್ನತ ಮಟ್ಟದಲ್ಲಿ ಏರಲು ಸದ್ಯತೆ ಇದೆ ಎಂದರು. 

ಮನೋಹರ್ ಶೆಟ್ಟಿ ಮನೋಹನ್ ಮಾತನಾಡಿ ಈ ರೀತಿಯ ಸೇವಾ ಕಾರ್ಯ ನಡೆಯುವ ಕಾರ್ಯಕ್ರಮದಲ್ಲಿ ನಾವೂ ಕೈ ಜೋಡಿಸಿ,ಸಮಾಜದ ಬದಲಾವಣೆಗೆ ಸಹಾಯ ಮಾಡುತ್ತೇವೆ ಎಂದರು ಇನ್ನು ಮುಂದಿನ ದಿನಗಳಲ್ಲಿ ಕೊಡವೂರು ಪರಿಸರದಲ್ಲಿ ಮನೆ ನಿರ್ಮಾಣ ಮಾಡಿಕೊಡಲಿದೆ,ಮತ್ತು ಯಾರಿಗೆ ದೃಷ್ಟಿಯ ದೋಷ ಇದೆ ಅವರಿಗೆ ಕನ್ನಡಕ ವಿತರಣೆ,ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಮಾಡಿ ಕೊಡುತ್ತೇವೆ ಎಂದರು.

ಕೌನ್ಸಿಲ್ ಚೇರ್ ಮನ್ ವೇಣು ಭಾನುಮತಿ, ಲಯನ್ಸ್ ಕ್ಲಬ್ ಅಧ್ಯಕ್ಷ ಮನೋಹರ್ ಶೆಟ್ಟಿ ತೋನ್ಸೆ, ಕೊಡವೂರು ವಾರ್ಡಿನ ನಗರ ಸಭಾ ಸದಸ್ಯ ಕೆ ವಿಜಯ್ ಕೊಡವೂರು, ಮಾಜಿ ಜಿಲ್ಲಾ ಗವರ್ನರ್, ಜಯಕರ್ ಶೆಟ್ಟಿ ಇಂದ್ರಾಳಿ, ರಿಷಿಕೇಷ್, ಚಂದ್ರಶೇಕರ್ ರಾವ್, ರತ್ನಾಕರ ಶೆಟ್ಟಿ, ಹರೀಶ್ ಕೊಪ್ಪಳ ತೋಟ ಇನ್ನಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply