ಕೊಲ್ಲೂರು : ಅಣಬೆ ಕೃಷಿ ಹಾಗೂ ನರ್ಸರಿ ಮತ್ತು ಕಸಿ ಕಟ್ಟುವ ವಿಚಾರವಾಗಿ ಕಾರ್ಯಾಗಾರ

ಕೊಲ್ಲೂರು : ಮೂಕಾಂಬಿಕಾ ಪರಿಸರ ಅಭಿವೃದ್ಧಿ ಸಮಿತಿ ಕೊಲ್ಲೂರು,ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ, ಭಾರತೀಯ ವಿಕಾಸ ಟ್ರಸ್ಟ್ ಮತ್ತು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ದಳಿ ಜಟ್ಟಿಗೇಶ್ವರ ಸಮುದಾಯ ಭವನದಲ್ಲಿ ಅಣಬೆ ಕೃಷಿ ಹಾಗೂ ನರ್ಸರಿ ಮತ್ತು ಕಸಿ ಕಟ್ಟುವ ವಿಚಾರವಾಗಿ ಕಾರ್ಯಾಗಾರ ನಡೆಯಿತು.

ಔಷಧಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಅಣಬೆ ಕೃಷಿಯ ಮಾಹಿತಿಯನ್ನು ಡಾ. ಸಂತೋಷ್ ಹಾಗೂ ನರ್ಸರಿ ಮತ್ತು ಕಸಿ ಕಟ್ಟುವ ವಿಚಾರವನ್ನು ಡಾ. ಚೈತನ್ಯ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರವವರಿಂದ ಅತ್ಯುತ್ತಮವಾಗಿ ವಿವರಿಸಿದರು.

ಮೂಕಾಂಬಿಕಾ ಪರಿಸರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ. ಶ್ರೀಕಾಂತ್, ಕೊಲ್ಲೂರು ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ನಾಯಕ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವರಾಮಕೃಷ್ಣ ಭಾರತೀಯ ವಿಕಾಸ್ ಟ್ರಸ್ಟ್ ನ ಸಂಯೋಜಕ ಅರುಣ್ ಮತ್ತು ಸುಮಂತ್ ಭಟ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಭಾರತಿಯ ವಿಕಾಸ್ ಟ್ರಸ್ಟಿನ ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಮೂಕಾಂಬಿಕಾ ಪರಿಸರ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ.ರೂಪೇಶ್ ಸಿಂಗ್ ಚೌಹಾನ್ ಎಲ್ಲರಿಗೂ ವಂದಿಸಿದರು.

 
 
 
 
 
 
 
 
 
 
 

Leave a Reply