ಗಾಂಧಿಯನ್ ಸೆಂಟರ್ ಫಾರ್ ಫಿಲೋಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ತರಗತಿ ಆಗಸ್ಟ್ 16 ರಿಂದ ಪ್ರಾರಂಭ

ಮಣಿಪಾಲ : ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಅಂಗಸಂಸ್ಥೆಯಾಗಿರುವ ಗಾಂಧಿಯನ್ ಸೆಂಟರ್ ಫಾರ್ ಫಿಲೋಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಇದೇ ಬರುವ ಆಗಸ್ಟ್ 16 ರಂದು ಹೊಸ ಉತ್ಸಾಹದೊಂದಿಗೆ, ತನ್ನ ಹೊಸ ತರಗತಿಗಳನ್ನು ಆರಂಭಿಸುತ್ತಿದೆ.

ಎಲ್ಲಾ ರೀತಿಯ ಕಲೆಗಳನ್ನು, ತತ್ವಶಾಸ್ತ್ರದ ದೃಷ್ಟಿಯಲ್ಲಿ ನೋಡುವ, ತತ್ವಶಾಸ್ತ್ರವನ್ನು ಪರಿಸರದ ಸಂವೇದನೆಯ ಮೂಲಕ ನೋಡುವ ಎಂ.ಎ. (ಏಕಾಸೊಫಿಕಲ್ ಎಸ್ಥೆಟಿಕ್ಸ್), ವಿವಿಧ ರೀತಿಯ ಕಲೆಗಳು ಅಂತರಂಗದ, ಬಹಿರಂಗದ ಹಾಗೂ ಅಂತಾರಾಷ್ಟ್ರೀಯ ಶಾಂತಿಗೆ ಕಾರಣವಾಗಬಹುದಾದ ಎಂ.ಎ.(ಆರ್ಟ್ ಅಂಡ್ ಪೀಸ್ ಸ್ಟಡೀಸ್), ಸೌಂದರ್ಯಶಾಸ್ತ್ರ ಹಾಗೂ ಶಾಂತಿ ಅಧ್ಯಯನಗಳು ಒಟ್ಟಿಗೆ

ಮೇಳೈಸಿದ ಬಿ.ಎ. (ಎಸ್ಥೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್) – ಇವೆಲ್ಲವುಗಳ ತರಗತಿಗಳು, ಆಗಸ್ಟ್ 16 ರಂದು ಆನ್ ಲೈನ್ ನಲ್ಲಿ ಆರಂಭಗೊಳ್ಳಲಿವೆ. ಸರ್ವೋದಯದ ಹಂಬಲವುಳ್ಳ ಗಾಂಧಿ- ಟಾಗೋರ್- ಅಂಬೇಡ್ಕರ್ ಚಿಂತನೆಗಳನ್ನು ಆಧಾರವಾಗಿಟ್ಟುಕೊಂಡಿರುವ, ಸಾಮಾಜಿಕ ಕಳಕಳಿಯುಳ್ಳ ಹೊಸ ಜನಾಂಗ ರೂಪಿಸುವ ತತ್ತ್ವಕ್ಕೆ ಬದ್ಧವಾಗಿರುವ, ಈ ಎಲ್ಲ ಕೋರ್ಸ್ ಗಳು ಹೊಸ ಯುಗಕ್ಕೆ ಮುನ್ನುಡಿ ಬರೆಯುವ ಹಂಬಲ ಹೊಂದಿವೆ. ಇಲ್ಲಿ ಓದಿದ ವಿದ್ಯಾರ್ಥಿಗಳು- ಪತ್ರಿಕೋದ್ಯಮ, ಮಾಧ್ಯಮ, ಸಮೂಹ ಸಂವಹನ, ಶಿಕ್ಷಣ,

ಸಂಶೋಧನೆ, ಅಂತಾರಾಷ್ಟ್ರೀಯ ಸಂಸ್ಥೆಗಳು, ಪಬ್ಲಿಷಿಂಗ್, ಯು.ಜಿ.ಸಿ. ,ಯು.ಪಿ.ಎಸ್.ಸಿ. ಪರೀಕ್ಷೆಗಳು, ಸೇವಾಸಂಸ್ಥೆಗಳು ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದ್ದಾಗಿದೆ ಎಂದು ಜಿಸಿಪಿಎಎಸ್ ನ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ತಿಳಿಸಿದ್ದಾರೆ.

ತರಗತಿಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಆಸಕ್ತರಿರುವ ವಿದ್ಯಾರ್ಥಿಗಳು ಆಗಸ್ಟ್ 10 ರ ಒಳಗೆ ನೊಂದಾಯಿಸಿಕೊಳ್ಳಬಹುದು

 
 
 
 
 
 
 
 
 
 
 

Leave a Reply