ಎಸ್ ಕೆಪಿಎ ಉಡುಪಿ ವಲಯ ವತಿಯಿಂದ ವಿಡಿಯೋ ಎಡಿಟಿಂಗ್ ಕಾರ್ಯಾಗಾರ

ನೂತನ ತಂತ್ರಜ್ಞಾನವನ್ನು ಕಾಲಕಾಲಕ್ಕೆ ನಾವು ಅಳವಡಿಸಿಕೊಂಡರೆ ನಮ್ಮ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಬಹುದು ಎಂದು ಖ್ಯಾತ ಹಿರಿಯ ಸಂಪನ್ಮೂಲ ವ್ಯಕ್ತಿ ಎಸ್. ಜಗದೀಸನ್ ಕರೆ ನೀಡಿದರು. ಅವರು ಕೊಡವೂರು ವಿಪ್ರಶ್ರೀ ಸಭಾಂಗಣದಲ್ಲಿ ಸೌತ್ ಕೆನರಾ  ಫೋಟೋಗ್ರಾಫರ್ ಅಸೋಶಿಯೇಶನ್ ಉಡುಪಿ ವಲಯ ಮಂಗಳವಾರದಂದು ಹಮ್ಮಿಕೊಂಡ ಒಂದು ದಿನದ ವಿಡಿಯೋ ಎಡಿಟಿಂಗ್ ಕಾರ್ಯಾಗಾರವನ್ನು ಜ್ಯೋತಿ  ಬೆಳಗಿಸಿ ಉದ್ಘಾಟಿಸಿ  ಮಾತನಾಡುತ್ತಿದ್ದರು.  
ದೃಶ್ಯಮಾಧ್ಯಮ ಕ್ಷೇತ್ರ ನಿಜಕ್ಕೂ ಕ್ರಿಯಾತ್ಮಕ ಮತ್ತು ವೈವಿದ್ಯಮಯ. ಅದೆಲ್ಲವನ್ನು ನಾವು ಅಳವಡಿಡಿಕೊಳ್ಳಬೇಕು ಎಂದರು. ಇನ್ನೋರ್ವ ಮುಖ್ಯ ಅತಿಥಿ ಸೌತ್ ಕೆನರಾ  ಫೋಟೋಗ್ರಾಫರ್ ಅಸೋಷಿಯೇಶನ್ ಜಿಲಾಧ್ಯಕ್ಸ ಕರಂದಾಡಿ ಶ್ರೀಧರ ಶೆಟ್ಟಿಗಾರ್ ಮಾತನಾಡಿ ವೃತ್ತಿ ಉಳಿದರೆ ಮಾತ್ರ ಸಂಘಟನೆ.
 
ಆದುದರಿಂದ ಸದಸ್ಯರಿಗೋಸ್ಕರ ಆಯೋಜಿಸುವ ಇಂತಹ ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯ ಮಿತ್ರರು ಭಾಗವಹಿಸಬೇಕೆಂದು ಕರೆ ನೀಡಿದರು. 
ಎಸ್. ಜಗದೀಸನ್ ರವರನ್ನು ಗೌರವಿಸಲಾಯಿತು. ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರ್ ಅಧ್ಯಕ್ಷತೆ ವಹಿಸಿ ದ್ದರು.   ಈ ಸಂದರ್ಭದಲ್ಲಿ ಕೋಶಾಧಿಕಾರಿ ಪ್ರಸಾದ್ ಜತ್ತನ್, ಪ್ರಸನ್ನ ಕೊಡವೂರು ಉಪಸ್ಥಿತರಿದ್ದರು. ಜಿಲ್ಲಾ ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು ಸ್ವಾಗತಿಸಿದರು. ವಲಯ ಕಾರ್ಯದರ್ಶಿ ಸುಕೇಶ್ ಕೆ ಅಮೀನ್ ವಂದಿಸಿದರು. ರಾಘವನ್ದ್ರ ಶೇರಿಗಾರ್ ನಿರೂಪಿಸಿದರು.      
   
 
 
 
 
 
 
 
 
 
 
 

Leave a Reply