ಕೈ ಮಗ್ಗ ಮತ್ತು ನಮ್ಮಪರಿಸರ~ ಡಾ.ರಶ್ಮಿ ಅಮ್ಮೆಂಬಳ

ಆಗಸ್ಟ್ 7 ರಾಷ್ಟ್ರೀಯ ಕೈಮಗ್ಗ ದಿನ. ಕೈಮಗ್ಗ ಮತ್ತು ಜವಳಿ ಇಲಾಖೆ 1991-9 ಸಾಲಿನಿಂದ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಉದ್ದೇಶದೊಂದಿಗೆ ಸ್ಥಾಪಿಸ ಲ್ಪಟ್ಟಿದೆ. ಶೇ.65ರಷ್ಟು ಕರ್ನಾಟಕದಲ್ಲಿಯೇ ರೇಷ್ಮೆ ಉತ್ಪಾದನೆ ಮಾಡಲಾಗುತ್ತಿದೆ. ಮಾತ್ರ ವಲ್ಲದೆ, ಹತ್ತಿಯನ್ನೂ ಕೂಡಾ ಸಾಕಷ್ಟು ಉತ್ಪಾದನೆ ಮಾಡಲಾಗುತ್ತಿದೆ. 
ತಾವು ತಿಳಿದಿರುವಂತೆ 8ನೇ ಶತಮಾನದಿಂದ ಕರ್ನಾಟಕದ ಉತ್ತರ ಭಾಗದಲ್ಲಿ ಕೈಮಗದ ಉತ್ಪಾದನೆ ಹೆಚ್ಚಾಗಿ ಕಂಡುಬರುತ್ತಿದೆ. ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಕೈಮಗ್ಗ ಉತ್ಪನ್ನಗಳಾದ ಉಡುಪಿ ಕಾಟನ್ ಸೀರೆ, ಮೈಸೂರು ರೇಷ್ಮೆ, ಇಳಕಲ್ ಸೀರೆ, ಮೊಳಕಾಲ್ಮೂರು ಸೀರೆ, ಗುಳೇದ ಗುಡ್ಡದ ಕಣ ಹೆಚ್ಚು ಪ್ರಚಲಿತ.
ಪ್ರಪಂಚದದ ಅತಿದೊಡ್ಡ ನೂಲಿನ ಗಿರಣಿ 2,11,548 ರಾಟೆಗಳನ್ನು ಹೊಂದಿರುವ ಘಟಕವು ನಮ್ಮ ರಾಜ್ಯದ ಹಾಸನದಲ್ಲಿ ಕಾರ್ಯಾಚರಿಸುತ್ತಿರವುದು ನಮಗೆಲ್ಲ ಹೆಮ್ಮೆಯ ಸಂಗತಿ ಮಾತ್ರ ವಲ್ಲದೆ ಇದರಿಂದ ಒಂದಷ್ಟು ಉದ್ಯೋಗವಕಾಶಗಳೂ ಸೃಷ್ಟಿಯಾಗುತ್ತಿರುವುದಂತೂ ಸತ್ಯ ನಮ್ಮ ದೇಶದ ಕೈಮಗ್ಗ ವಸ್ರೋದ್ಯಮ ಸಾಂಪ್ರದಾಯಿಕ ತಾಂತ್ರಿಕತೆ ಹಾಗೂ ವಿನ್ಯಾಸಗಳನ್ನು ಅಳವಡಿಸಿ ಕೊಂಡಿತು. 
ಅಲ್ಲದೆ ಅತ್ಯಾಕರ್ಷಕ ಕಲೆ, ವಿನ್ಯಾಸಗಳನ್ನು ಮಾಡಿ ಕೈಮಗ್ಗ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಲಾಗುತ್ತಿದೆ. ಆದರೂ ಕೈಮಗ್ಗ ಕ್ಷೇತ್ರವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂಥಾ ಒಂದು ಪ್ರಾಚೀನ ಉದ್ಯಮಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುವ ಅಗತ್ಯ ಇಂದಿನ ದಿನಗಳಲ್ಲಿ ಕಂಡು ಬರುತ್ತಿರುವುದು ಅದರ ಔಚಿತ್ಯವನ್ನು ಸಾರಿ ಹೇಳುವಂತಿದೆ.
ಜವಳಿ ಅಭಿವೃದ್ಧಿ ಇಲಾಖೆಯು ಕೈಮಗ್ಗ ಯೋಜನೆಗೆ ಕೆಲವು ಮಾರ್ಗ ನೀತಿಗಳನ್ನು ಅಳವಡಿಸಿ ಕೊಂಡಿದೆ. ರಾಷ್ಟ್ರೀಯ  ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮ, ಮಹಾತ್ಮಗಾಂಧೀ ಬುನ್ಕರ್ ಬೀಮಾ ಯೋಜನೆ, ಕೈಮಗ್ಗ ನೇಕಾರರಿಗೆ ಆರೋಗ್ಯ ವಿಮಾ ಯೋಜನೆ, ತರಬೇತಿ, ಮೃತ ನೇಕಾರರ ಅಂತ್ಯ ಸಂಸ್ಕಾರದ ವೆಚ್ಚ ಮರುಪಾವತಿ, ನಬಾರ್ಡ್ ಪುನರ್ಧನ ಯೋಜನೆಯಡಿ ಬಡ್ಡಿ ಸಹಾಯ ಧನ, ಪ್ರವಾಸ, ಮಿತವ್ಯಯ ನಿಧಿ ಯೋಜನೆ.
ಸಹಕಾರಿ ಬ್ಯಾಂಕುಗಳು ನೀಡಿದ 1% ಮತ್ತು 3% ಸಾಲದ ಬಡ್ಡಿ ಸಹಾಯಧನ, ಮಿತವ್ಯಯ ನಿಧಿ ಯೋಜನೆಯ ಬಡ್ಡಿ, ಕೈಮಗ್ಗ ಉತ್ಪನ್ನಗಳ ಮಾರಾಟದ ಮೇಲೆ ಶೇ 20ರಷ್ಟು ರಿಬೇಟ್ ಯೋಜನೆ ಕೈಮಗ್ಗ ವಿಕಾಸ ಯೋಜನೆ, ಕೈಮಗ್ಗ ನೇಕಾರರ ಸಹಕಾರಿ ಸಂಘಗಳಿಗೆ ಪ್ರೋತ್ಸಾಹಧನ, ಕೈಮಗ್ಗಗಳಿಗೆ ಮೊಟರೈಸ್ಡ್ ಜಕಾರ್ಡ್, ಸಲಕರಣೆಗಳ ಕಿಟ್, ಕೈಮಗ್ಗಗಳ ವಿನ್ಯಾಸಗಳ ಉನ್ನತೀಕರಣಕ್ಕಾಗಿ ಎಲೆಕ್ಟ್ರಾನಿಕ್  ಜಕಾರ್ಡ್ ಒದಗಿಸುವ ಯೋಜನೆಯೂ ಇವೆ. 
ಮನುಷ್ಯನ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ವಸ್ತ್ರೋದ್ಯಮವನ್ನು ಪರಿಸರಕ್ಕೆ ಮಾರಕವಾಗ ದಂತೆ ಅಭಿವೃದ್ಧಿ ಪಡಿಸುವ ಅವಶ್ಯಕತೆ ಬಹಳಷ್ಟಿದೆ. ನಮ್ಮಲ್ಲಿ ಕೈಮಗ್ಗ ಉತ್ಪನ್ನವನ್ನು ಉತ್ಪಾದನೆ ಮಾಡುವ ಉದ್ದಿಮೆಗಳು ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿರುವುದು ನಮ್ಮ ಕಣ್ಣ ಮುಂದಿ ರುವ ಸತ್ಯ. ಉಡುಪಿ ಪರಿಸರದಲ್ಲಿ ಕೈಮಗ್ಗದ ಕಾಯಕದಲ್ಲಿ ತೊಡಗಿರುವವರು ಸಿಗುವುದು ಕೇವಲ ಕೇಲವೇ ಸಂಖ್ಯೆಯಷ್ಟು ಮಾತ್ರ. 
ಸಾಕಷ್ಟು ವ್ಯಾಯಾಮ ಈ ವೃತ್ತಿಯಲ್ಲಿ ಸಿಗುತ್ತಿರುವುದರಿಂದ ವೃತ್ತಿ ಕೈಬಿಡಲು ಮನಸ್ಸಿಲ್ಲದ ಉಡುಪಿ ಮಾರ್ಪಳ್ಳಿಯ ಬುಟ್ಟಾಸೀರೆ ತಯಾರಿಕೆಗೆ ಹೆಸರಾದ ಕೈಮಗ್ಗ ನೇಕಾರರಾದ ಭೋಜ ಪೂಜಾರಿ (70) ಈ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುವ ಮಂದಿಯಿಲ್ಲ ಎಂದು ಬೇಸರ ವ್ಯಕ್ತ ಪಡಿಸುತ್ತಾರೆ. ಇದರಲ್ಲಿ ಸಾಕಷ್ಟು ಲಾಭವಿಲ್ಲದೆ ಇರುವುದು ಇವರ ಕೊರಗಿಗೆ ಕಾರಣವಾಗಿದೆ.
ಕೈಮಗ್ಗದ ಉತ್ಪನ್ನಗಳು ಪರಿಸರ ಸ್ನೇಹಿಯಾಗಿರುವ ಕಾರಣ ಪ್ಲಾಸ್ಟಿಕ್‌ನಂತೆ ದೊಡ್ಡ ಮಟ್ಟದ ಋಣಾತ್ಮಕ ಪರಿಣಾಮಗಳು ಬಹಳ ಕಡಿಮೆ. ಅಲ್ಲದೆ ಈ ಉತ್ಪನ್ನಗಳು ಶಕ್ತಿ, ವಿದ್ಯುತ್, ನೀರು ಇವೆಲ್ಲವನ್ನೂ ಮಿತವಾಗಿ ಬಳಸುವುದು. ಅಲ್ಲದೆ ಈ ಉತ್ಪನ್ನಗಳಿಗೆ ವಿಷಕಾರಿ ಅಂಶಗಳನ್ನು ಬಳಸಲಾಗುವುದಿಲ್ಲ.
ವಸ್ತ್ರಗಳನ್ನೂ ಆಯ್ಕೆಮಾಡುವುದು ನಮಗಿರುವ ಸ್ವಾತಂತ್ರ್ಯ ಹಾಗಿರುವಾಗ ನೈಸರ್ಗಿಕ ವಸ್ತು ಗಳನ್ನು ಉಪಯೋಗಿಸಿ ತಯಾರಿಸಲಾದ ಇಂತಹ ಉತ್ಪನ್ನಗಳು ಪರಿಸರಕ್ಕೆ ಮಾರಕವಾಗಿ ಪರಿಣಮಿಸುವುದೆಂದು ಹೇಳಲಾಗದು. 
ಯಾಕೆಂದರೆ ಕೈಮಗ್ಗ ಉತ್ಪನ್ನಗಳ ಉತ್ಪಾದನೆಯಲ್ಲಿ ಗಾಳಿ, ನೀರು, ಭೂಮಿ, ಶಬ್ದ ಇತ್ಯಾದಿಗಳ ಮಾಲಿನ್ಯ ಇಲ್ಲವೆನ್ನಬಹುದು. ಕೈಮಗ್ಗ ಉತ್ಪಾದನೆಯಲ್ಲಿ ಬಳಸುವ ಡೈಗಳನ್ನು ನೈಸರ್ಗಿಕವಾಗಿ ಅಂದರೆ ತರಕಾರಿ, ಮರದ ತೊಗಟೆ, ಹೂ, ಎಲೆ ಹಾಗೂ ಖನಿಜಾಂಶಗಳನ್ನು ಬಳಸಿಯೂ ಮಾಡ ಬಹುದು. ಕೈಮಗ್ಗ ಉತ್ಪನ್ನಗಳು ಎಂದಿಗೂ ಪರಿಸರ ಸ್ನೇಹಿಯಾಗಿ ಇರುವಂಥವು ಎನ್ನುವುದನ್ನು ನಾವು ಆರ್ಥೈಸಲೇ ಬೇಕು. ಅಲ್ಲದೆ ಅವುಗಳನ್ನು ಮರು ಉತ್ಪಾದನೆಗೂ ಬಳಸಬಹುದಾಗಿದೆ.
ದೀರ್ಘಕಾಲದವರೆಗೆ ಬಳಸಬಹುದಾದ ಅಲ್ಲದೆ ನೈಸರ್ಗಿಕ ಉತ್ಪನ್ನಗಳನ್ನು ಬಳಸಿ  ಹೊಲಿಯಲಾ ದ ಕೈಮಗ್ಗ ಉತ್ಪನ್ನಗಳು ನಿಜಕ್ಕೂ ಪರಿಸರ ಸ್ನೇಹಿ ಮಾತ್ರವಲ್ಲದೆ ನಮ್ಮ ವ್ಯಕ್ತಿತ್ವದ ದ್ಯೋತಕ ವಾಗಿಯೂ ಗುರುತಿಸಲ್ಪಡುವುದು ವಿಶೇಷ.
ನಮ್ಮ ಭಾರತೀಯ ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ಎತ್ತಿ ಹಿಡಿಯಬಲ್ಲ ಶಕ್ತಿ ಕೈಮಗ್ಗಕ್ಕಿದೆ ಎಂದರೆ ಅತಿಶಯೋಕ್ತಿ ಯಾಗಲಾರದು. ಹಲವಾರು ಮಂದಿಯ ಹೊಟ್ಟೆಗೆ ಅನ್ನ ನೀಡಬಲ್ಲ ಈ ಕೈಮಗ್ಗದ ಉತ್ಪನ್ನಗಳನ್ನು ನಾವು ಹೆಚ್ಚಾಗಿ ಬಳಸುವತ್ತ ಮನಸ್ಸು ಮಾಡಬೇಕಿದೆ.
ಆ ಮೂಲಕ ಪರಿಸರ ಪ್ರೇಮಿಗಳಾಗಬೇಕಾದ ಅನಿವಾರ್ಯತಯೆಯೂ ಇದೆ. ನಮ್ಮ ಪರಸರ ವನ್ನು ಉಳಿಸೋಣ, ಕೈಮಗ್ಗದ ಉತ್ಪನ್ನಗಳಿಗೆ ಜೈ ಎನ್ನೋಣ ಆಗದೆ ?
 
 
 
 
 
 
 
 
 
 
 

Leave a Reply