ತುಳು ಅಕಾಡೆಮಿಗೆ ಶೀಘ್ರ ಭೇಟಿ ನೀಡುವೆ ~ ಸಚಿವ ವಿ. ಸುನಿಲ್‌ಕುಮಾರ್

ಮಂಗಳೂರು : ಮಂಗಳೂರಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಕಚೇರಿಗೆ ಶೀಘ್ರವಾಗಿ ಭೇಟಿ ನೀಡಿ ತುಳು ಭಾಷೆ ಮತ್ತು ಸಂಸ್ಕೃತಿಗಾಗಿ ನಡೆಸುತ್ತಿರುವ ಕಾರ್ಯಚಟುವಟಿಕೆಯನ್ನು ಗಮನಿಸುವೆ.

ಜವಬ್ದಾರಿಯುತ ಸ್ಥಾನಮಾನವಾಗಿರುವ ಕಾರಣ ಮಾಹಿತಿಯನ್ನು ಪಡೆದುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಇನ್ನಷ್ಟು ಕಾರ್ಯ ಚಟುವಟಿಕೆಯ ಮೂಲಕ ನಡೆಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ನೂತನವಾಗಿ ಆಯ್ಕೆಯಾಗಿರುವ ಕಾರ್ಕಳದ ಶಾಸಕ ವಿ. ಸುನಿಲ್‌ಕುಮಾರ್ ಹೇಳಿದರು.

ಅವರು ಕಾರ್ಕಳದ ತಮ್ಮ ಕಚೇರಿ “ವಿಕಾಸ”ದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಅವರ ನೇತೃತ್ವದಲ್ಲಿ ಸದಸ್ಯರ ನಿಯೋಗ ಭೇಟಿ ನೀಡಿದ ಸಮಯದಲ್ಲಿ ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ ಸಚಿವರನ್ನು ಸರಳವಾಗಿ ಅಕಾಡೆಮಿಯಿಂದ ಅಭಿನಂದಿಸಿ ತುಳುನಾಡಿನ ಸಿರಿತುಪ್ಪೆ ಹಾಗೂ ತುಳು ಆಷಾಢ (ಆಟಿ) ಮಾಸದ ವಿಶೇಷತೆಯ ಪುಸ್ತಕವನ್ನು ಹಸ್ತಾಂತರಿ ಸಲಾಯಿತು.

ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಅವರು ಮಾತನಾಡಿ, ತುಳುನಾಡಿನ ಶಾಸಕರೊಬ್ಬರು ಕನ್ನಡ ಮತ್ತು ಸಂಸ್ಕೃತಿಕ ಸಚಿವರ ಸ್ಥಾನಮಾನ ಪಡೆದಿರುವುದು ತುಳುವರಿಗೆ ಹೆಮ್ಮೆತರು ವಂತದ್ದು. ನಿರೀಕ್ಷೆ ಹೆಚ್ಚಿದ್ದರೂ ಸಾಧನೆ ಮಾಡುವಲ್ಲಿ ವಿಫಲರಾಗುವುದಿಲ್ಲ ಎಂಬ ಆಶಯ ಇದೆ.

ತುಳು ರಾಜ್ಯ ಭಾಷೆಗೆ ಮಾನ್ಯತೆ ಸಿಗುವಲ್ಲಿ ಪೂರ್ಣ ಭರವಸೆ ನಮ್ಮಲ್ಲಿದೆ. ತುಳು ಭವನದ ಪೂರ್ಣ ನಿರ್ಮಾಣಕ್ಕಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ನಡೆಸಬೇಕು ಎಂದು ವಿನಂತಿಸಿಕೊಂಡರು.

ಅಕಾಡೆಮಿಯ ಸದಸ್ಯರಾದ ನಿಟ್ಟೆ ಶಶಿಧರ ಶೆಟ್ಟಿ, ನರೇಂದ್ರ ಕೆರೆಕಾಡು, ಚೇತಕ್ ಪೂಜಾರಿ ಮಂಗಳೂರು, ಸಂತೋಷ್ ಪೂಜಾರಿ ಕಾರ್ಕಳ ಅವರು ನಿಯೋಗದಲ್ಲಿದ್ದರು.

 
 
 
 
 
 
 
 
 
 
 

Leave a Reply