ಗಾಂಧೀಜಿ- ಒಂದು ವಿಶ್ಲೇಷಣೆ~ ಬೆನಗಲ್ ನಾರಾಯಣ ಮೂರ್ತಿ

ಗಾಂಧೀಜಿಯವರ ಜನ್ಮದಿನ ಅಕ್ಟೋಬರ್ 2,1869. ಬಾಲ್ಯದ ದಿನಗಳು, ವಿದ್ಯಾಭ್ಯಾಸ, ಅವರ ದಕ್ಷಿಣ ಆಫ್ರಿಕಾದ ವೃತ್ತಿಜೀವನ ಇವುಗಳ ಬಗ್ಗೆ ವಿವರ ಇಲ್ಲಿ ಚರ್ಚಿಸಿಲ್ಲ. ನಂತರ ಭಾರತದದಲ್ಲಿ ಅವರು ವಕೀಲಿ ಪ್ರಾರಂಭಿಸಿ ನಿಧಾನವಾಗಿ ಹೆಸರು ಗಳಿಸಿ ಕಾಂಗ್ರೆಸ್ಸಿನ ಮೂಲಕ ಸ್ವಾತಂತ್ರ್ಯ ಚಳುವಳಿಯ ಮುಂಚೂಣಿಯ ನಾಯಕರಾದರು. ಬಿಹಾರಿನ ಚಂಪಾರನ್ ಜಿಲ್ಲೆಯಲ್ಲಿ ನೀಲಿ ತೋಟದ ಕಾರ್ಮಿಕರ ಬವಣೆಗಳನ್ನು ಕುರಿತು ನಡೆಸಿದ ಹೋರಾಟದಲ್ಲಿ ಜಯಹೊಂದಿದರು. ಮುಂದೆ ದಾಂಡಿ ಮಾರ್ಚ್ ಎಂಬ ಹೆಸರಿನ ಉಪ್ಪಿನ ಸತ್ಯಾಗ್ರಹದ ನೇತೃತ್ವ ವಹಿಸಿದ್ದರು. ಹೀಗೆ ಬೆಳೆದುಬಂದ ಅವರು ಕಾಂಗ್ರೆಸಿನ ಪ್ರಮುಖರಾದರು. ಮತ್ತೆ ಅಂತಿಮವಾಗಿ ಆಗಸ್ಟ್ 15 ,1947 ನಮ್ಮ ದೇಶ ಬ್ರಿಟಿಷರ ಕಪಿ ಮುಷ್ಠಿಯಿಂದ ಬಿಡುಗಡೆ ಹೊಂದಿ ಸ್ವತಂತ್ರ ವಾದದ್ದು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ.
ಈಗ ಗಾಂಧೀಜಿಯವರ ವ್ಯಕ್ತಿತ್ವವನ್ನು ಹೇಗೆಂದು ಬಣ್ಣಿಸುವ?. ಅವರು ಹತ್ತು ಹಲವು ವಿಚಾರಗಳನ್ನು ಹೊಂದಿದ್ದರು. ಮೊದಲಿನಿಂದಲೂ ರಾಜಕೀಯ ಅಧಿಕಾರದಿಂದ ಮಾತ್ರ ಜನರ ಏಳಿಗೆ ಆಗದು. ಸಮಾಜದ ಹಲವು ವಿಕೃತಿಗಳನ್ನು ನಿವಾರಿಸಬೇಕೆಂಬುದು ಅವರ ನಿಲುವಾಗಿತ್ತು. ಪ್ರಥಮವಾಗಿ ದಲಿತರಿಗೆ ಸಮಾನತೆಗೆ ಅವರು ಪ್ರಾಶಸ್ತ್ಯ ನೀಡಿದರು. “ಹರಿಜನ,” ಪತ್ರಿಕೆಯ ಮೂಲಕ ಜನಾಭಿಪ್ರಾಯವನ್ನು ಕ್ರೋಢೀಕರಿಸಿದರು. ಹಾಗೇ ವಯಸ್ಕರ ಶಿಕ್ಷಣ, ಸ್ವದೇಶಿ ಅಭಿಯಾನ, ಪಾನನಿರೋಧ ಆಂದೋಲನ ,ಸ್ವಚ್ಛತಾ ಚಳುವಳಿಗಳಿಗೆ ಶಕ್ತಿ ತುಂಬಿದರು. ಅವರ ಸ್ವದೇಶಿ ಅಭಿಯಾನದಿಂದ ಇಂಗ್ಲೆಂಡಿನ ಕಾಟನ್ ಗಿರಣಿಗಳ ವ್ಯಾಪಾರ ಕುಂಠಿತ ಗೊಂಡಿತು. ಅವರು ಸಂತರಂತೆ ಕೇವಲ 2 ತುಂಡು ವಸ್ತ್ರ ಧರಿಸಿ ಆಶ್ರಮದಲ್ಲಿ ಸಂತರಂತೆ ಜೀವಿಸಿದರು. ಹೀಗೆ  ಹಲವು ಸಾಮಾಜಿಕ  ಸುಧಾರಣೆ ಗಳನ್ನು ರೂಪಿಸುವಲ್ಲಿ ಅವರು ಯಶಸ್ವಿಯಾದರು. ಗ್ರಾಮ. ಸ್ವರಾಜ್ಯ ಅವರ ಇನ್ನೊಂದು ಕನಸು.
ತಮ್ಮನ್ನು ಸನಾತನ ಹಿಂದೂ ಎಂದುಕೊಳ್ಳುವುದರಲ್ಲಿ ಅವರು ಮುಜುಗರಪಡುತ್ತಿರಲಿಲ್ಲ. ಈ ದೇಶ ರಾಮರಾಜ್ಯ ವಾಗಬೇಕು. ಗೋ ರಕ್ಷಣೆಬಗ್ಗೆ ಕಾನೂನು ತರಬೇಕೆಂಬುದು ಅವರ ಆಶಯವಾಗಿತ್ತು. ಭಾರತದಲ್ಲಿ ಹಿಂದೂ ಮುಸ್ಲಿಮರು ಸಹೋದರರಂತೆ ಬಾಳಬೇಕೆಂಬ ಆಶಯದಿಂದ “ರಘುಪತಿ ರಾಘವ ರಾಜಾರಾಮ್ ಗೆ ಈಶ್ವರ ಅಲ್ಲಾ ತೇರೇ ನಾಮ್” ಸೇರಿಸಿದರು. ಅದು ಹಿಂದುಗಳ ಭಜನೆ ಯ ಭಾಗವಾಯ್ತು. ಆದರೆ ಯಾವ ಮುಸ್ಲಿಂ ಕೂಡಾ ಇದನ್ನು ಹಾಡಲಿಲ್ಲ. ಇವರನ್ನು ಮುಸ್ಲಿಮರು ಹಿಂದೂ ಮುಖಂಡನೆಂದು ಕಂಡರೆ ಹೊರತು ದೇಶದ ಏಕೈಕ ನಾಯಕನೆಂದು ಗುರುತಿಸಲಿಲ್ಲ. ರಾಜಕೀಯವಾಗಿ ಇವರ ಹಲವು ನಡೆಗಳು ಪ್ರಶ್ನಾರ್ಹವಾಗಿದ್ದವು.
ಉದಾಹರಣೆಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾದಾಗ ಅವರಿಗೆ ಸಹಕರಿಸಲಿಲ್ಲ. ಹೆಚ್ಚಿನ ಪ್ರಾದೇಶಿಕ ಕಾಂಗ್ರೆಸ್ ಸಮಿತಿಗಳು ಸರ್ದಾರ್ ಪಟೇಲರ ಹೆಸರನ್ನು ಪ್ರಧಾನಿ ಪದವಿಗೆ ಶಿಫಾರಸ್ಸು ಮಾಡಿದಾಗ ಇವರು ನೆಹರೂಗೆ ಪಟ್ಟ ಕಟ್ಟಿದರು. ಇವರ ವಿರೋಧದ ನಡುವೆಯೂ ದೇಶ ವಿಭಜನೆಯಾಯ್ತು. ಆಗ ನಡೆದ ಹಿಂದೂಗಳ ಹತ್ಯಾಕಾಂಡದ ವಿರುಧ್ಧ ಪ್ರತಿಭಟನೆಗಳಾದವು. ಆಗ ಇವರು ಒಂದು ರೀತಿಯ ತಟಸ್ಥ ನಿಲುವು ತಳೆದರು. ಹಿಂದುಗಳು ಪ್ರತಿಭಟಿಸಲು ರಸ್ತೆಗೆ ಇಳಿದಾಗ ಇವರು ಅದನ್ನು ವಿರೋಧಿಸಿ ಉಪವಾಸ ಕುಳಿತರು.
ಆದರೂ ಇಷ್ಟೆಲ್ಲ ವಿಚಾರಗಳ ಮಧ್ಯೆ ಗಾಂಧೀಜಿ ವ್ಯಕ್ತಿತ್ವದಲ್ಲಿ ವಿಶೇಷತೆಗಳನ್ನು ನೋಡುವ. ಈ ವ್ಯಕ್ತಿ ಈ ದೇಶದ ಸಾಮಾನ್ಯ ಜನತೆಯ ಆರಾಧ್ಯದೈವವಾದದ್ದು ಅವರ ನೇರ ದಿಟ್ಟ ಸ್ವಾರ್ಥರಹಿತ ನಡೆಯಿಂದ ಎಂದೂ ಹಿಂಸಾ ಮಾರ್ಗ ವನ್ನು ಬೆಂಬಲಿಸಲಿಲ್ಲ. ಸತ್ಯಾಗ್ರಹದ ಮಾರ್ಗದಲ್ಲಿ ಕೋಟಿ ಕೋಟಿ ಜನ ಅವರ ಕರೆಗೆ ಓಗೊಟ್ಟು ಲಾಠಿ ಪೆಟ್ಟು ತಿಂದರು, ಜೈಲ್ ಸೇರಿದರು. ಮಾನವನ ಇತಿಹಾಸದಲ್ಲಿ ಸತ್ಯಾಗ್ರಹ ಒಂದು ಹೊಸ ಅಸ್ತ್ರ ವಾಗಿ ಹೊರಹೊಮ್ಮಿತು. ಪ್ರಪಂಚದ ವಿವಿಧೆಡೆಗಳಲ್ಲಿ ನಡೆದ ಚಳುವಳಿಯ ನೇತಾರರು ಸತ್ಯಾಗ್ರಹದ ಕಡೆ ಒಲವು ತೋರಿದರು. ಹೀಗೆ ಗಾಂಧೀಜಿ ಆ ಕಾಲಘಟ್ಟದ ಅತ್ಯಂತ ಪ್ರಮುಖ ನೇತಾರ ರಾಗಿ ಗುರುತಿಸಲ್ಪಟ್ಟರು.

ಗಾಂಧೀಜಿಯವರ ಸಾಮಾಜಿಕ  ಪರಿವರ್ತನಾ ಕ್ಷೇತ್ರದ ಹೋರಾಟಗಳು ಅತ್ಯಂತ ಫಲಕಾರಿ ಯಾದವು. ಅವರ ಹಲವು ರಾಜಕೀಯ ನಿಲುವುಗಳು ವಿವಾದಾತ್ಮಕ. ಆದರೂ ಒಟ್ಟಿನಲ್ಲಿ ನೋಡಿದಾಗ ಗಾಂಧೀಜಿ ಒಬ್ಬ ಸಂತರಾಗಿ ಮಹಾತ್ಮ ಬಿರುದಿಗೆ ಶೋಭೆ ತರುತ್ತಾರೆ. ಅವರ ನೆನಪುಗಳಿಗೆ ನನ್ನ ನಮನಗಳು.

~ಬೆನಗಲ್ ನಾರಾಯಣ ಮೂರ್ತಿ, ಮಣಿಪಾಲ.
 
 
 
 
 
 
 
 
 
 
 

Leave a Reply