ಕತ೯ವ್ಯ ಪ್ರಜ್ಞತೆಯ ಶ್ರೇಷ್ಠ ಉದಾಹರಣೆ

ಬುದ್ಧಿಯಿಂದ ಕಾಯ೯ ನಿವ೯ಹಿಸು ಶುದ್ಧತೆಯಿಂದ ಜೀವನ ನಿವ೯ಹಿಸು ” ಈ ಮಾತು ಪ್ರದಾನಿ ಮೋದಿಯವರ ತಾಯಿ ಹೀರಾಬಾ ರವರು ತನ್ನ ಮಗನಿಗೆ ಹೇಳಿದ ಮಾತು.
ಈ ಮಾತು ಕೇವಲ ಒಬ್ಬರಿಗೆ ಹೇಳಿದ ಮಾತಲ್ಲ ಬದಲಾಗಿ ನಮ್ಮೆಲ್ಲರಿಗೂ ಈ ಮಾತು ಅನ್ವಯಿಸುತ್ತದೆ.

ತನ್ನ ಜೀವಿತ ಅವಧಿಯಲ್ಲಿ ಆದಶ೯ ತೆಯಲ್ಲಿ ಜೀವನ ನಿವ೯ಹಿಸಿ ಅತ್ಯಂತ ಸರಳತೆಯಲ್ಲಿ ತನ್ನ ಜೀವನ ಸಾಗಿಸಿ, ತನ್ನ ಮಗ ಪ್ರಧಾನಿಯಾದರೂ, ಯಾವುದೇ ಸವಲತ್ತನ್ನು ಪಡೆಯದೆ ಸಣ್ಣ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ಶತಾಯುಷಿ ಹೀರಾಬಾ ತನ್ನ ಜೀವನ ಯಾತ್ರೆ ಮುಗಿಸಿದ್ದಾರೆ.
ತನ್ನ ಆದಶ೯ತೆಯ ಗುಣಗಳನ್ನು ಮಕ್ಕಳಿಗೆ ಧಾರೆ ಎರೆದಿದ್ದರು. ಅವರಂತೆ ನಾನಾಗ ಬೇಕು ಎಂದು ಸ್ವತಃ ಪ್ರಧಾನಿಯವರೇ ಹೇಳಿದ್ದ ನೆನಪು.

ಕತ೯ವ್ಯದ ಮುಂದೆ ಎಲ್ಲವೂ ಗೌಣ: –

ಬೆಳಗ್ಗೆ 6 ಗಂಟೆ ಹೊತ್ತಿಗೆ ವಿಷಯ ಗೊತ್ತಾಯ್ತು. 9:30 ಅಷ್ಟು ಹೊತ್ತಿಗೆ ಎಲ್ಲಾ ಕೆಲಸಗಳೂ ಮುಗಿದೋಯ್ತು…ಕೇವಲ 3:30 ಗಂಟೆ ಅಷ್ಟೇ…
ದೇಶದ ಜನಪ್ರಿಯ ಪ್ರದಾನಿಯೊಬ್ಬರ ತಾಯಿಯ ಅಂತ್ಯಕ್ರಿಯೆ ಯಾವುದೇ ಪ್ರಚಾರ, ಆಡಂಬರವಿಲ್ಲದೆ ಮುಗಿದೋಯ್ತು..

ಯಾವುದೇ ರೀತಿಯ ರಾಜಕೀಯ ನಾಯಕರ ಉಪಸ್ಥಿತಿಯಿಲ್ಲದ, ಸಕಾ೯ರಿ ಗೌರವ ಎಂಬ ಯಾವುದೇ ಗೌಜಿ ಗದ್ದಲವಿಲ್ಲದೆ ಅವರ ತಾಯಿಯ ಅಂತ್ಯಕ್ರಿಯೆ ನಡೆದದ್ದು ವಿಶೇಷ.ನಮ್ಮಲ್ಲಿ ಒಬ್ಬ ಪಂಚಾಯತ್ ಸದಸ್ಯರ ಕುಟುಂಬದಲ್ಲಿ ಸಾವು ಸಂಭವಿಸಿದಲ್ಲಿ ನಡೆಯುವ ಗದ್ದಲವನ್ನು ನಾವು ನೋಡಿದ್ದೇವೆ. ಆದರೆ ದೇಶದ ಪ್ರಧಾನಿಗಳ ತಾಯಿಯ ಪಾಥಿ೯ವ ಶರೀರ ಅಂತ್ಯಕ್ರಿಯೆ ಎಲ್ಲದರಿಂದ ದೂರವಿದ್ದದ್ದು ನಂಬಲು ಅಸಾಧ್ಯ.

ಕತ೯ವ್ಯ ಮುಖ್ಯ ಎಂಬಂತೆ ನಮ್ಮ ಪ್ರಧಾನಿಯವರು ತುಂಬಾ ದು:ಖದಲ್ಲಿದ್ದರೂ ತನ್ನ ಯಾವುದೇ ಸಕಾ೯ರಿ ಅಧಿಕೃತ ಕಾಯ೯ಕ್ರಮಗಳನ್ನು ರದ್ದು ಮಾಡದೆ, ಎಲ್ಲ ಕಾಯ೯ಕ್ರಮದಲ್ಲಿ ದು:ಖವನ್ನು ತೋರಿಸದೆ, ತನ್ನ ಕತ೯ವ್ಯದಲ್ಲಿ ತೊಡಗಿದ್ದು, ಎಲ್ಲರಿಗೂ ಮಾದರಿ.

ಬೆಳ್ಳಗ್ಗಿನಿಂದ ಸಂಜೆವರೆಗಿನ ಮಾಧ್ಯಮಗಳ ಲೈವ್ ಇಲ್ಲ.. ಮಾಧ್ಯಮಗಳಿಗೂ ಯಾವುದೆ ಅವಕಾಶ ಕೊಡದೆ, ದೇಶದ ಕತ೯ ವ್ಯ ಮೊದಲು ಎಂಬುವುದು ಪ್ರಧಾನಿಯ ನಡವಳಿಕೆಯಿಂದ ನಮಗೆ ತಿಳಿಯುತ್ತದೆ.

ದೊಡ್ಡ ಮಟ್ಟದಲ್ಲಿ ಶವಯಾತ್ರೆಗೆ ವ್ಯವಸ್ಥೆ ಇಲ್ಲ…
ರಸ್ತೆ ಹೆದ್ದಾರಿಗಳ ಟ್ರಾಫಿಕ್ ಜಾಮ್ ಇಲ್ಲ..
ಸಾರ್ವಜನಿಕ ದರ್ಶನಕ್ಕಾಗಿ ವ್ಯವಸ್ಥೆ ಇಲ್ಲ…

ಮಗನ ಅಭಿಮಾನಿಗಳ ಘೋಷಣೆಗಳ ಕೂಗಿಲ್ಲ…
ಅಂತ್ಯಸಂಸ್ಕಾರಕ್ಕಾಗಿ ಎಕರೆಗಟ್ಟಲೆ ಜಾಗದ ನೆಲಸಮ ಇಲ್ಲ…
ಶವದ ಮೇಲೆ ರಾಷ್ಟ್ರಧ್ವಜದ ಹೊದಿಕೆ ಇಲ್ಲ…
ಅಗ್ನಿಸ್ಪರ್ಶಕ್ಕೆ ಶ್ರೀಗಂಧದ ಕಟ್ಟಿಗೆಗಳಿಲ್ಲ… ಈ ರೀತಿಯ ಸನ್ನಿವೇಶ ನಾವು ಊಹಿಸಲು ಅಸಾಧ್ಯ.

ರಾಜಕೀಯ ವಿರೋಧಿಗಳು ಕೂಡ ಪ್ರಧಾನಿಯವರ ಕತ೯ವ್ಯ ಪ್ರಜ್ಞತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷವಾಗಿದೆ.

ಒಟ್ಟಾಗಿ ಹೇಳುದಾದರೆ, ಕತ೯ವ್ಯವೇ ಶ್ರೇಷ್ಠ ಕೆಲದಲ್ಲಿ ನಾವೆಲ್ಲರೂ ದೇವರನ್ನು ಕಾಣಬಹುದು. ಈ ನಿಟ್ಟಿನಲ್ಲಿ ಈ ಘಟನೆ ಕೂಡ ದೃಷ್ಟಾಂತವಾಗಿದೆ.
ಕಾಯಕವೇ ಕೈಲಾಸ.

ರಾಘವೇಂದ್ರ ಪ್ರಭು,ಕವಾ೯ಲು

 
 
 
 
 
 
 
 
 
 
 

Leave a Reply