ಬೇಡ ಅತಿಯಾದ ಅಹಂಕಾರ~ ಡಾ. ಶಶಿಕಿರಣ್ ಶೆಟ್ಟಿ

ಬೆಲ್ಲಕ್ಕೆ ತನ್ನ ಸಿಹಿಯ ಮೇಲೆ ಅತಿಯಾದ ಆತ್ಮವಿಶ್ವಾಸವಿತ್ತು. ಸಿಹಿ ಕೊಟ್ಟು ಯಾರನ್ನಾದರೂ ಕರಗಿಸ ಬಲ್ಲೆ ಎನ್ನುವ ಯೋಚನೆಯಲ್ಲಿ ಬೆಂಕಿಯೊಂದಿಗೆ ಬೆರೆಯಿತು. ಈಗ ಬಾಣಲೆಯೊಳಗೆ ಕರಗುತ್ತಿದೆ ಬೆಲ್ಲ.

ಅದೇ ಬೆಲ್ಲವನ್ನು ಕರಗಿಸಿದ ಬೆಂಕಿಗೂ ತನ್ನ ತೀಕ್ಷಣ ಉರಿ ಯಬಗ್ಗೆ ಅತಿ ಅಹಂಕಾರವಿತ್ತು.  ತಾನು ಯಾರನ್ನೂ ಸುಟ್ಟಹಾಕಬಲ್ಲೆ ಎಂದು ತಿಳಿದು ನೀರಿನೊಂದಿಗೆ ಬೆರೆಯಿತು. ಈಗ ಕಿಚ್ಛೆಲ್ಲ ಆರಿ ಬರಿಯ ಬೂದಿಯಷ್ಟೇ ಉಳಿದಿದೆ.

ನೆನಪಿಡಿ ನಾನೇ ಶ್ರೇಷ್ಠ, ನಾನೇ ಪರಾಕ್ರಾಮಿ ಎನ್ನುವ ಅತಿಯಾದ ಅಹಂಕಾರ, ಆತ್ಮವಿಶ್ವಾಸ ಎರಡೂ ಒಳ್ಳೆಯದಲ್ಲ.  ಪರಮಾತ್ಮ ಮನಸ್ಸು ಮಾಡಿದರೆ ನಿಮಿಷ ಸಾಕು ನಿಮ್ಮನ್ನು ಕರಗಿಸಲು, ನಿಮ್ಮನ್ನು ಬೂದಿ ಮಾಡಲು…… ಅಲ್ಲವೇ?

 
 
 
 
 
 
 
 
 
 
 

Leave a Reply