ಯು.ಪಿ.ಎಂ‌.ಸಿಯ ಟೇಕ್ವಾಂಡೋ ಪಟು ಸೂರಜ್ ಕುಮಾರ್ ಗೆ ಚಿನ್ನದ ಪದಕ

ಬೆಂಗಳೂರು : ಆಜ್ಹಾದಿ ಕಾ ಅಮೃತ್ ಮಹೋತ್ಸವ ಫಿಟ್ ಇಂಡಿಯಾ ಓಪನ್ ನ್ಯಾಷನಲ್ ‘ಟೇಕ್ವಾಂಡೋ’ ಚಾಂಪಿಯನ್ ಶಿಪ್ 2021 ರಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಟೇಕ್ವಾಂಡೋ ಪಟು ಸೂರಜ್ ಕುಮಾರ್ ಗೆ ಚಿನ್ನದ ಪದಕ ಲಭಿಸಿದೆ.

ಜೆಪಿ ಪಾರ್ಕ್ ಟೇಕ್ವಾಂಡೋ ಟ್ರೈನಿಂಗ್ ಸೆಂಟರ್ (ರಿ) ಬೆಂಗಳೂರು ಇವರ ಆಶ್ರಯದಲ್ಲಿ ಡಿ. 4 ಮತ್ತು 5ರಂದು ಜರುಗಿದ ‘ಟೇಕ್ವಾಂಡೋ ಚ್ಯಾಂಪಿಯನ್ ಶಿಪ್ 2021’ ರಲ್ಲಿ ಉಡುಪಿ ಜಿಲ್ಲಾ ಕೇಂದ್ರವನ್ನು ಪ್ರತಿನಿಧಿಸಿ ಸೀನಿಯರ್ ಬಾಯ್ ಅಂಡರ್ 60 ಕೆ.ಜಿ ಮತ್ತು ಪುರುಷರ ವೈಯಕ್ತಿಕ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.

ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗು ಉಪನ್ಯಾಸಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಶುಭಾಶಯಗಳನ್ನು ಕೋರಿದರು.

 
 
 
 
 
 
 
 
 
 
 

Leave a Reply