Janardhan Kodavoor/ Team KaravaliXpress
29.6 C
Udupi
Thursday, January 20, 2022
Sathyanatha Stores Brahmavara

ನೀಲಾವರ ಸುರೇಂದ್ರ ಅಡಿಗರಿಗೆ ಕಸಾಪ ಅಧಿಕಾರ ಹಸ್ತಾಂತರ

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಆಡಳಿತಾಧಿಕಾರಿಯಾಗಿದ್ದ ಕುಮಾರ ಬೆಕ್ಕೇರಿಯವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ನೂತನ ಅಧ್ಯಕ್ಷರಾಗಿ ಸತತ ಮೂರನೇ ಅವಧಿಗೆ ಆಯ್ಕೆಯಾದ ನೀಲಾವರ ಸುರೇಂದ್ರ ಅಡಿಗರವರಿಗೆ ಮಂಗಳವಾರ ಸಂಜೆ ತಮ್ಮ ಕಛೇರಿಯಲ್ಲಿ ಗೌರವಿಸಿ ಅಧಿಕಾರವನ್ನು ಹಸ್ತಾಂತರಿಸಿ ಶುಭ ಕೋರಿದರು. 
ಈ ಸಂದರ್ಭದಲ್ಲಿ ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನಿಕಟಪೂರ್ವ ತಾಲೂಕು ಅಧ್ಯಕ್ಷರುಗಳಾದ ಪ್ರಭಾಕರ ಶೆಟ್ಟಿ ಕೊಂಡಳ್ಳಿ (ಕಾರ್ಕಳ),  ಬಿ.ಪುಂಡಲೀಕ ಮರಾಠೆ (ಕಾಪು), ನಾರಾಯಣ ಮಡಿ (ಬ್ರಹ್ಮಾವರ), ಕಸಾಪ ಸದಸ್ಯರುಗಳಾದ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಭುವನಪ್ರಸಾದ್ ಹೆಗ್ಡೆ, ನರಸಿಂಹಮೂರ್ತಿ, ಕಛೇರಿ ಸಿಬ್ಬಂಧಿಗಳಾದ  ಗಣೇಶ್, ದೀಕ್ಷಿತ್ ಉಪಸ್ಥಿತರಿದ್ದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!