ಶ್ರೀಧರ್ ಡಿ.ಎಸ್ ಗೆ ಹುಟ್ಟೂರ ಅಭಿನಂದನೆ ಮತ್ತು ಗ್ರಂಥ ಸಮರ್ಪಣೆ

ಶ್ರೇಷ್ಠ ಪ್ರಸಂಗಕರ್ತ, ನಿವೃತ್ತ ಉಪನ್ಯಾಸಕ, ಸಂಘಟಕ, ತಾಳಮದ್ದಲೆ ಅರ್ಥದಾರಿ, ವಿಮರ್ಶಕ,ಈ ಬಾರಿಯ ಪಾರ್ತಿಸುಬ್ಬ ಪ್ರಶಸ್ತಿಗೆ ಭಾಜನರಾದ ಶ್ರೀಧರ್ ಡಿ.ಎಸ್.ರನ್ನು ಹುಟ್ಟೂರಾದ ಶಿವಮೊಗ್ಗ ಜಿಲ್ಲೆಯ ನಿಟ್ಟೂರಿನಲ್ಲಿ ಊರ ಮಂದಿ ಹಾಗೂ ಅಭಿಮಾನಿ ಬಳಗ ಸೇರಿ ವಿಶೇಷ ರೀತಿಯಲ್ಲಿ ಅಭಿನಂದಿಸಿದರು.

ರವಿ ಮಡೋಡಿ,ಸುಧಾಕಿರಣ ಅಧಿಕಶ್ರೇಣಿ,ಶ್ರೀನಿಧಿ ಡಿ.ಎಸ್, ಶ್ರೀಕಲಾ ಡಿ. ಎಸ್. ಇವರ ಸಂಪಾದಕತ್ವದಲ್ಲಿ ‘ಯಕ್ಷ ಶ್ರೀಧರ’ ಗೌರವ ಗ್ರಂಥ ಸಮರ್ಪಣೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ಎರಡು ದಶಕಗಳ ಕಾಲ ಹನ್ನಾರ ಮೇಳವನ್ನು ನಡೆಸಿದ ಶ್ರೀಧರ್ ಡಿ.ಎಸ್ ತೀರ್ಥರೂಪರಾದ ಶ್ರೀ ಪಾದಯ್ಯನವರ ಸಂಸ್ಮರಣೆ ಕಾರ್ಯಕ್ರಮವು ಸಂಪನ್ನಗೊಂಡಿತು.

ಸಮಾರಂಭದಲ್ಲಿ ಡಾ. ಶಾಂತಾರಾಮ ಪ್ರಭು, ಸುಬ್ರಹ್ಮಣ್ಯ ಧಾರೇಶ್ವರ,ಪ್ರೊ. ನಾರಾಯಣ ಎಂ ಹೆಗಡೆ,ಮುರಲಿ ಕಡೆಕಾರ್ ಮುಖ್ಯ ಅಭ್ಯಾಗತರಾಗಿ ಪಾಲ್ಗೊಂಡರು. ಸಮಾರಂಭದ ಬಳಿಕ ಬೆಂಗಳೂರಿನ ಯಕ್ಷ ಸಿಂಚನ ತಂಡದವರಿಂದ ಕಚದೇವಯಾನಿ ಯಕ್ಷಗಾನ ಪ್ರದರ್ಶನಗೊಂಡಿತು.

 
 
 
 
 
 
 
 
 
 
 

Leave a Reply