ವಿನಮ್ರ ಸಹಾಯಧನ ವಿತರಣಾ ಸಮಾರಂಭ

ಉಡುಪಿ : ಶಿಕ್ಷಣವು ಸಂಸ್ಕಾರಯುತ ವಿದ್ಯಾರ್ಥಿಗಳ ರೂಪಣೆಗೆ ಪ್ರೇರಣೆಯಾಗಬೇಕು, ರಾಷ್ಟ್ರ ಪ್ರೇಮವನ್ನು ಉದ್ದೀಪನಗೊಳಿಸುವಂತಿರಬೇಕು.ವಿದ್ಯಾಪೋಷಕ್ ಕಾರ್ಯ ಚಟುವಟಿಕೆ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಾಲಿಗೆ ಒದಗಿ ಬಂದ ಸುವರ್ಣ ಅವಕಾಶ ಎಂದು ಡಿಸೆಂಬರ್ 5ರಂದು ಪೂರ್ಣಪ್ರಜ್ಞಾ ಸಭಾಂಗಣದಲ್ಲಿ ಜರಗಿದ 17ನೇ ವಿನಮ್ರ ಸಹಾಯಧನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ನುಡಿದರು.

ಅಂಬಲಪಾಡಿ ದೇವಳದ ಡಾ. ನಿ. ಬೀ. ವಿಜಯ ಬಲ್ಲಾಳ ಈ ಸಂದರ್ಭದಲ್ಲಿ ಮಾತನಾಡಿ, ತಂದೆ-ತಾಯಿಗೆ ಗೌರವ ನೀಡುವುದರೊಂದಿಗೆ ಉನ್ನತಿಗೆ ಕಾರಣರಾದ ವ್ಯಕ್ತಿ-ಸಂಸ್ಥೆಗಳನ್ನು ಮರೆಯದೆ ತಮ್ಮ ಋಣ ಸಂದಾಯ ಮಾಡಬೇಕಾಗಿದೆ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ನುಡಿದರು.

ಚೆನ್ನೈನ ಅಣ್ಣಾಮಲೈ ಕೊಡಮಾಡಿದ 25000/-ನೆರವನ್ನು ಬೈಂದೂರು ಸರಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕಗಳಿಸಿದ ಮೂರು ವಿದ್ಯಾರ್ಥಿನಿಯರಿಗೆ ವಿತರಿಸಲಾಯಿತು. ಉತ್ತಮ ಪತ್ರ ಬರೆದ ಹಾಗೂ ಉತ್ತಮ ಕಡತ ನಿರ್ವಹಣೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಇದೇ ಸಂದರ್ಭದಲ್ಲಿ ಉದ್ಯೋಗ ದೊರೆತ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ನೀಡಿ ಅಭಿನಂದಿಸಲಾಯಿತು. 

ಅಭ್ಯಾಗತರಾಗಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಬಂಟಕಲ್ ಇಂಜಿನೀಯರಿಕಗ್ ಕಾಲೇಜಿನ ಕಾರ್ಯದರ್ಶಿ ರತ್ನಕುಮಾರ್, ಆದರ್ಶ ಆಸ್ಪತ್ರೆಯ ಎಂ.ಡಿ. ಡಾ. ಜಿ. ಎಸ್. ಚಂದ್ರಶೇಖರ್, ಸಿ.ಎ. ಗಣೇಶ್ ಕಾಂಚನ್ ಮತ್ತು ಮೈಲೈಫ್‌ನ ಸಂಸ್ಥಾಪಕ ಪ್ರವೀಣ್ ಗುಡಿ ಭಾಗವಹಿಸಿದ್ದರು. 

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಉಪಸ್ಥಿತರಿದ್ದ ಸಭೆಯಲ್ಲಿ ಉಪಾಧ್ಯಕ್ಷರಾದ ಎಸ್. ವಿ. ಭಟ್ ಸ್ವಾಗತಿಸಿದರು, ಗಣೇಶ್ ರಾವ್ ಎಲ್ಲೂರು ನಿರೂಪಿಸಿದರು.ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಶೋಕ ಎಂ. ವಂದಿಸಿದರು.

 
 
 
 
 
 
 
 
 
 
 

Leave a Reply